ಚಿಟ್ಟಿಗಾಗಿ ಗೃಹಿಣಿಯಾದ ಹರ್ಷಿಕಾ ಪೂಣಚ್ಚ

ಸಿನಿಮಾಡೆಸ್ಕ್:ಕೊಡಗಿನ ಬೆಡಗಿ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಬಿಜಿ ಆಗಿದ್ದ ಅವರು ಈಗ ಕನ್ನಡದ ಹೊಸ ಸಿನಿಮಾವೊಂದರಲ್ಲಿ ಅಭಿನಯ ಮಾಡುತ್ತಿದ್ದಾರೆ ಅಂದ ಹಾಗೇ ಸಿನಿಮಾದ ಹೆಸರು ‘ಚಿಟ್ಟೆ.

ಎಂ.ಎಲ್. ಪ್ರಸನ್ನ ಅವರ ಚೊಚ್ಚಲ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ನಾಯಕನಾಗಿ ಯಶಸ್ ಸೂರ್ಯ ಹಾಗೂ ನಾಯಕಿಯಾಗಿ ಹರ್ಷಿಕಾ ನಟಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದ್ದು, ಸಿನಿಮಾದಲ್ಲಿ ಹರ್ಷಿಕಾ ಇದೇ ಮೊದಲ ಬಾರಿಗೆ ಇಂಥದ್ದೊಂದು ಪಾತ್ರವನ್ನು ಅಭಿನಯ ಮಾಡುತ್ತಿದ್ದು, ಸಿನಿಮಾದಲ್ಲಿ ಸಂಸಾರಿಯಾಗಿ ಅಭಿನಯ ಮಾಡುತ್ತಿದ್ದಾರಂತೆ,

ಸಿನಿಮಾದಲ್ಲಿ ಅಭಿನಯ ಮಾಡಲು ಬೇಕಾದ ಪೂರ್ವ ತಯಾರಿಗಳನ್ನು ಈಗಾಗಾಲೇ ಅವರು ಹೋಂ ವರ್ಕ್ ಮಾಡಿಕೊಂಡು ಕ್ಯಾಮಾರ ಮುಂದೆ ಅಭಿನಯಿಸುತ್ತಿದ್ದಾರಂತೆ,

ಸದ್ಯ ಹರ್ಷಿಕಾ ‘ಚಿಟ್ಟೆ’ಯ ಜತೆಗೆ ‘ಅದಿತಿ’ ಹಾಗೂ ‘ಉಪೇಂದ್ರ..

ಮತ್ತೆ ಬಾ ಹಾಗೂ ತಮಿಳಿನ ‘ಉನ್ ಕಾದಲ್ ಇರುಂದಾಲ್’ ಚಿತ್ರದಲ್ಲಿ ಅಭಿನಯಿಸಿದ್ದು, ‘ಉಪೇಂದ್ರ..ಮತ್ತೆ ಬಾ’ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ನಡೆಯುತ್ತಿವೆಯಂತೆ.

Courtesy: Kannada News Now

Facebook Auto Publish Powered By : XYZScripts.com