ಚಾಲೇಂಜಿಂಗ್ ಹುಟ್ಟುಹಬ್ಬಕ್ಕೆ ‘ಚಕ್ರವರ್ತಿ’ ರಿಲೀಸ್​

ಫ್ಯಾನ್ಸ್ಗೆ ಮಾತ್ರ ಅಲ್ಲ…. ಇಡೀ ಗಾಂಧೀನಗರದಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ ಚಕ್ರವರ್ತಿ. ಈಗಾಗ್ಲೇ ಈ ಸಿನಿಮಾ ಯಾವಾಗ ರಿಲೀಸ್ ಆಗುತ್ತಪ್ಪಾ ಅಂತ ಫ್ಯಾನ್ಸ್ ಉಸಿರು ಬಿಗಿ ಹಿಡಿದು ಕಾಯುವಂತೆ ಮಾಡಿದೆ. ಇದೀಗ ಚಕ್ರವರ್ತಿ ಅಡ್ಡಾದಿಂದ ಬಿಗ್ ನ್ಯೂಸ್ ಒಂದು ಹೊರಬಿದ್ದಿದೆ. ದರ್ಶನ್ ಫ್ಯಾನ್ಸ್ ಎಕ್ಟೈಟ್ ಆಗುವಂತೆ ಮಾಡಿರೋ ಚಕ್ರವರ್ತಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ..
ಹೌದು ದರ್ಶನ್ ಅಭಿಮಾನಿಗಳಿಗೆ ಈ ಸರ್ತಿ ಡಬಲ್ ಸಂಕ್ರಾಂತಿ. ಯಾಕಂದ್ರೆ 2017ರ ಮೊದಲ ಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ತಮ್ಮ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಲಿದ್ದಾರೆ. ‘ಚಕ್ರವರ್ತಿ’ ಚಿತ್ರದ ಆಡಿಯೋ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಸಂಕ್ರಾಂತಿಗೆ ದರ್ಶನ್ ಸಿನಿಮಾದ ಹಾಡುಗಳನ್ನ ಕೇಳಬಹುದಾಗಿದೆ. ಕೇವಲ ಹಾಡುಗಳು ಮಾತ್ರವಲ್ಲ, ‘ಚಕ್ರವರ್ತಿ’ಯ ಟೀಸರ್ ಕೂಡ ಅಂದೇ ರಿಲೀಸ್ ಆಗಲಿದೆ.
ಇದ್ರ ಜೊತೆ ಮತ್ತೊಂದು ಇಂಟ್ರಸ್ಟಿಂಗ್ ವಿಷ್ಯಾ ಅಂದ್ರೆ ಆಡಿಯೋ ಟೀಸರ್ ರಿಲೀಸ್ ಆಗಿ ಒಂದು ತಿಂಗಳಿಗೆ ಚಕ್ರವರ್ತಿ ಸಿನಿಮಾ ಥಿಯೇಟರ್ಗೆ ಎಂಟ್ರಿ ಕೊಡಲಿದೆ. ಫೆಬ್ರವರಿ 16ಕ್ಕೆ ಚಾಲೆಂಜಿಂಗ್ ಸ್ಟಾರ್ ಹುಟ್ಟಿದ ಹಬ್ಬ. ಸೋ ಈ ಬರ್ತ್ಡೇಗೆ ಜಗ್ಗುದಾದ ಫ್ಯಾನ್ಸ್ಗೆ ಬಿಗ್ ಗಿಫ್ಟ್ ಕೊಡುವ ಪ್ಲ್ಯಾನ್ ಮಾಡಿದ್ದು, ಹುಟ್ಟುಹಬ್ಬದ ಹಿಂದೆ ಮುಂದೆ ಚಕ್ರವರ್ತಿ ಸಿನಿಮಾ ತೆರೆಗೆ ಬರ್ತಿದೆ..
ಸಧ್ಯ ಚಕ್ರವರ್ತಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದೆ. ಎವಿ ಚಿಂತನ್ ನಿರ್ದೇಶನದ ಚಕ್ರವರ್ತಿ’ 80ರ ದಶಕದ ನೈಜ ಕಥೆಯಾಧರಿತ ಸಿನಿಮಾವಾಗಿದ್ದು, ಇಲ್ಲಿ ದರ್ಶನ್ ಡಾನ್ ಪಾತ್ರದಲ್ಲಿ ಮಿಂಚಿದ್ದಾರೆ
Courtesy: Balkani News

Facebook Auto Publish Powered By : XYZScripts.com