ಚಾಲೆಂಜಿಂಗ್ ಸ್ಟಾರ್ ದರ್ಶನ್ ದೃವ ಸರ್ಜಾ ಮೇಲೆ ಗರಂ ಆಗಿ ಚಾರ್ಜ್ ತೆಗೆದುಕೊಂಡಿದ್ದೇಕೆ?… ಇಲ್ಲಿ ಓದಿ

ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಹಾಗೂ ದೃವ ಸರ್ಜಾ ಅವರ ನಡುವಿನ ಸ್ನೇಹದ ಬಗ್ಗೆ ಹೇಳಲೇ ಬೇಕಾಗಿಲ್ಲ. ಈ ಹಿಂದೆ ಬಂದಿದ್ದ ಬ್ಲಾಕ್ ಬ್ಲಸ್ಟರ್ ಹಿಟ್ ‘ಭರ್ಜರಿ’ ಚಿತ್ರಕ್ಕೆ ದರ್ಶನ್ ಅವರು ಕಂಠಧಾನ ಮಾಡಿದ್ದರು. ಮತ್ತು ಅದೇ ರೀತಿ ಇದೀಗ, ಯಜಮಾನ ಚಿತ್ರದ ಟೀಸರ್ ಗೆ ದೃವ ಸರ್ಜಾ ವಾಯ್ಸ್ ಕೊಟ್ಟಿದ್ದಾರೆ. ಈ ಮೂಲಕ ಯಜಮಾನ ಚಿತ್ರದ ಖದರ್ ಮತ್ತಷ್ಟು ಹೆಚ್ಚಿಸಿದೆ. ಹೀಗಿರುವಾಗ ದೃವ ಸರ್ಜಾ ಮೇಲೆ ದರ್ಶನ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಈ ಗರಂಗೆ ಕಾರಣವೂ ಇದೆ.

ಇತ್ತಿಚೆಗಷ್ಟೇ ಭರ್ಜರಿ ಸಿನಿಮಾದ ಕುರಿತಂತೆ ನಿರ್ಮಾಪಕ ಕೆ. ಶ್ರೀನಿವಾಸ್ ಅವರು ಮಾತನಾಡಿದ್ದಾರೆ. ಈ ಚಿತ್ರ ಕೇವಲ 4 ಕೋಟಿ ಲಾಭ ಗಳಿಸಿದೆ. ಒಟ್ಟು 17 ಕೋಟಿ ಖರ್ಚಾಗಿತ್ತು. ಆದರೆ ಗಳಿಕೆ ಕಂಡಿದ್ದು ಬರೀ 21 ಕೋಟಿ ಅಂತ ಹೇಳಿದ್ದಾರೆ. ಮತ್ತೂ ಈ ಚಿತ್ರದ ಬಹುತೇಕ ತಂತ್ರಜ್ಷರೇ ಯಜಮಾನ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ದರ್ಶನ್ ಅವರಿಗೆ ತಿಳಿದು ಬಂದಿದ್ದೇನೆಂದರೆ ಈ ವರೆಗೂ ಯಾರಿಗೂ ಸಂಭಾವನೆ ನೀಡಿರುವುದಿಲ್ಲ. ಹೀಗಾಗಿ ಇದೇ ವಿಚಾರವನ್ನು ಮಾತನಾಡಲು ದೃವ ಸರ್ಜಾರಿಗೆ ಪೋನ್ ಮಾಡಿದ್ದಾರೆ ದರ್ಶನ್.

“ನಿರ್ಮಾಪಕರಾದವರು ಈ ರೀತಿಯ ಹೇಳಿಕೆಗಳನ್ನು ಕೊಡುವುದು ಸಾಮಾನ್ಯ. ಆದರೆ ಚಿತ್ರದ ನಾಯಕನಾದವನು, ನಿರ್ಮಾಪಕರ ಜೊತೆ ಇದರ ಬಗ್ಗೆ ಚರ್ಚೆ ಮಾಡಬೇಕಿತ್ತು ಹಾಗೂ ಅವರವರ ಸಂಭಾವನೆಯನ್ನು ಕೊಡಿಸಬೇಕು. ಇಂತಹ ಕ್ಷಣದಲ್ಲಿ ನೀನು ಮೌನವಾಗಿರುವುದು ನಿಜಕ್ಕೂ ತಪ್ಪು.” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ದರ್ಶನ್.

Facebook Auto Publish Powered By : XYZScripts.com