ಚಳಿಗಾಲಕ್ಕೆ ಬಾಳೆಹಣ್ಣಿನ ಮಾಸ್ಕ್

ಚಳಿಗಾಲದ ವಾತವರಣ ಫ್ರೆಶ್ ಆಂಡ್ ಕೂಲ್ ಆಗಿದ್ದರೂ ಬಹುತೇಕ ಜನರಿಗೆ ಅದನ್ನು ಎಂಜಾಯ್ ಮಾಡಲು ಆಗುವುದಿಲ್ಲ. ಕಾರಣ ಈ ಕಾಲದಲ್ಲಿ ತ್ವಚೆ ಅತಿ ಎನಿಸುವಷ್ಟು ಶುಷ್ಕಗೊಳ್ಳುತ್ತದೆ. ಅಷ್ಟೇ ಅಲ್ಲ ಕೆರೆತ ಹೆಚ್ಚಿ ನವೆ ಉಂಟಾಗುತ್ತದೆ. ಈ ಸಮಸ್ಯೆ ಕಾಡಬಾರದು, ಇದರಿಂದ ಪಾರಾಗಬೇಕು ಎಂಬ ಆಲೋಚನೆಯಲ್ಲಿ ನೀವಿದ್ದರೆ ಇಂದೇ ಬಾಳೆಹಣ್ಣಿನ ಮಾಸ್ಕ್ ಬಳಸಿ. ಶುಷ್ಕ ತ್ವಚೆಯ ಸಮಸ್ಯೆಗೊಂದು ಫುಲ್ ಸ್ಟಾಪ್ ಇಡಿ. ಹೌದು ಬಾಳೆಹಣ್ಣಿನ ಮಾಸ್ಕ್, ನಿಮ್ಮ ಮನೆಯಲ್ಲಿರುವ ಕೋಲ್ಡ್ ಕ್ರೀಮ್ ಗಿಂತಲೂ ಹೆಚ್ಚಿನ ಎಫೆಕ್ಟ್ ನೀಡುತ್ತದೆ.
ಬಾಳೆಹಣ್ಣಿನ ಮಾಸ್ಕ್ ತಯಾರಿಸುವುದು ಬಹಳ ಸುಲಭ. ಮನೆಯಲ್ಲಿ ಅರ್ಧ ಬಾಳೆಹಣ್ಣು, ಒಂದು ಟೀ ಸ್ಪೂನ್ ನಷ್ಟು ಜೇನುತುಪ್ಪವಿದ್ದರೆ ಸಾಕು.
ಬಳಸುವ ವಿಧಾನ:
ಬಾಳೆಹಣ್ಣನ್ನು ಚೆನ್ನಾಗಿ ಮ್ಯಾಶ್ ಮಾಡಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ.(ಬಾಳೆಹಣ್ಣನ್ನು ದೊಡ್ಡ ದೊಡ್ಡ ಉಂಡೆಯಂತೆ ಬಿಡದೆ ಚೆನ್ನಾಗಿ ಮ್ಯಾಶ್ ಮಾಡಿದರೆ ಮಾಸ್ಕ್ ಚೆನ್ನಾಗಿ ಬರುತ್ತದೆ). ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 15-20 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ಮುಖ ತೊಳೆಯಿರಿ.
ಪ್ರಯೋಜನಗಳು:
ಬಾಳೆಹಣ್ಣು ‘ನ್ಯಾಚುರಲ್ ಸ್ಕಿನ್ ಮೊಯಿಶ್ಚರೈಸರ್’ ಆಗಿದ್ದು, ಇದರಲ್ಲಿ ವಿಟಮಿನ್ ಸಿ, ಬಿ6 ಮತ್ತು ಎ ಅಂಶಗಳಿರುವುದರಿಂದ ಒಣ ತ್ವಚೆಗೆ ಅಗತ್ಯವಾದ ಮೊಯಿಶ್ಚರೈಸರ್ ಅನ್ನು ನೀಡುತ್ತದೆ. ಮುಖ ಸುಕ್ಕಾಗದಂತೆ ತಡೆಯುತ್ತದೆ. ತ್ವಚೆ ಮೃದುವಾಗುತ್ತದೆ.
Courtesy: Balkani News

Facebook Auto Publish Powered By : XYZScripts.com