ಚಕ್ರವ್ಯೂಹ ನಂತರ ಮತ್ತೊಮ್ಮೆ ಪರಭಾಷಾ ನಿರ್ದೇಶಕನ ಕೈಯಲ್ಲಿ ಅಪ್ಪು?

ಪವರ್ಸ್ಟಾರ್ ಸ್ಯಾಂಡಲ್ವುಡ್ನಲ್ಲಿ  ಓಡೋ ಕುದುರೆ. ಬಿರುದಿಗೆ ತಕ್ಕಂತೆ ಬಾಕ್ಸ್ಆಫೀಸ್ನಲ್ಲಿ ಪವರ್ ತೋರಿಸೋ ನಟ. ಇದೀಗ ಅಪ್ಪು ರಾಜಕುಮಾರ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಈಗಾಗ್ಲೇ ಈ ಚಿತ್ರ ಭರ್ತಿ ಕುತೂಹಲ ಹುಟ್ಟಿಸಿದೆ. ಇದಲ್ಲದೆ ಇನ್ನು ಹಲವು ಚಿತ್ರಗಳ ಅಪ್ಪು ಕೈಯಲ್ಲಿದೆ. ಇದೀಗ ಪುನೀತ್ ಸಿನಿಮಾಗಳಿಗೆ ಸಂಬಂಧಿಸಿದಂತೆ ಮತ್ತೊಂದು ನ್ಯೂಸ್ ಬಂದಿದೆ. ಕಳೆದ ಕೆಲವು ದಿನಗಳಿಂದ ಈ ಸುದ್ದಿ ಗಾಂಧಿನಗರದಲ್ಲಿ ಹರಿದಾಡ್ತಿದೆ. ಈ ಸುದ್ದಿ ಕೇಳಿದ್ರೆ ಅಪ್ಪು ಫ್ಯಾನ್ಸ್ ಥ್ರಿಲ್ ಆಗೋದರಲ್ಲಿ ಅನುಮಾನವೇ ಇಲ್ಲ.  ಪುನೀತ್ ಮತ್ತೊಂದು ಹೊಸ ಸಿನಿಮಾದ ಸ್ಕ್ರಿಪ್ಟ್ ಓಕೆ ಮಾಡಿದ್ದಾರಂತೆ. ಅಂದಹಾಗೆ ಅಪ್ಪು ಈ ಸರ್ತಿ ಮೆಚ್ಚಿಕೊಂಡಿರೋದು ಪರಭಾಷಾ ನಿರ್ದೇಶಕ ಗೌತಮ್ ಮೆನನ್ ಸ್ಕ್ರಿಪ್ಟ್ನ್ನು. ಈಗಾಗ್ಲೇ ಮೊದಲ ಸುತ್ತಿನ ಮಾತುಕತೆ ನಡೆದಿದೆಯಂತೆ. ಅಂದಹಾಗೆ ಗೌತಮ್ ಮೆನನ್ ಸೌತ್ ಸಿನಿರಂಗದ ಪ್ರತಿಭಾವಂತ ನಿರ್ದೇಶಕ. ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಬಾಲಿವುಡ್ನಲ್ಲಿ ತೆರೆಕಂಡ  ರೆಹನಾ ಹೈ ತೇರೆ ದಿಲ್ ಮೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಕೂಡ ಗೌತಮ್ ಮೆನನ್. ಇದೀಗ ಗೌತಮ್ ಮೆನನ್ ಇದೇ ಮೊದಲ ಬಾರಿ ಕನ್ನಡ ಸಿನಿಮಾ ನಿರ್ದೇಶನ ಮಾಡೋದಕ್ಕೆ ಮುಂದಾಗಿದ್ದಾರೆ. ಪುನೀತ್ ಕೂಡ ಸಿನಿಮಾದ ಕಥೆ ಮೆಚ್ಚಿಕೊಂಡಿರೋದರಿಂದ ಪುನೀತ್- ಮೆನನ್ ಕಾಂಬಿನೇಶನ್ ಸಿನಿಮಾ ಬರೋದು ಗ್ಯಾರಂಟಿ ಎನ್ನಲಾಗ್ತಿದೆ.  ಅಂದಹಾಗೆ ಗೌತಮ್ ಮೆನನ್ ರೆಡಿ ಮಾಡಿರುವ ಈ ಕಥೆಯಲ್ಲಿ ಮೂವರು ನಾಯಕಿಯರಿದ್ದಾರೆ ಅನ್ನುವ ಸುದ್ದಿ ಇದೆ. ಇಬ್ಬರು ಗ್ಲ್ಯಾಮರ್ ಗೆಟಪ್ನಲ್ಲಿ ಕಾಣಿಸಿಕೊಂಡ್ರೆ ಒಬ್ಬಳು ದೇಸಿ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಇದೆ. ಆದ್ರೆ ಯಾರು ಹೀರೋಯಿನ್ ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಆದ್ರೆ ಅನುಷ್ಕಾ, ತಮನ್ನಾ ಹೆಸರೆಲ್ಲಾ ಕೇಳತಿಬರ್ತಿದೆ.
Courtesy: Balkani News

Facebook Auto Publish Powered By : XYZScripts.com