ಚಕ್ರವರ್ತಿ ಸಿನಿಮಾ ನೋಡಿ ಪ್ರೇಕ್ಷಕರು ಏನಂದ್ರು ?

ಸ್ಯಾಂಡಲ್ವುಡ್ನಲ್ಲಿ ಸಖತ್ ಹವಾ ಕ್ರಿಯೆಟ್ ಮಾಡಿದ್ದ ಬಹುನಿರೀಕ್ಷಿತ ‘ಚಕ್ರವರ್ತಿ’ ಚಿತ್ರ ಇಂದು ರಿಲೀಸ್ ಆಗಿದೆ.

ಈ ನಡುವೆ ರಾಜ್ಯಾದ್ಯಂತ ಅನೇಕ ಚಿತ್ರಮಂದಿರಗಳಲ್ಲಿ ‘ಚಕ್ರವರ್ತಿ’ 12 ಗಂಟೆಯಿಂದಲೇ ಪ್ರದರ್ಶನಗೊಂಡಿದ್ದು, ಜೊತೆಗೆ ಸಿನಿಮಾ ಇತಿಹಾಸದಲ್ಲಿ ೧೫ ಮಲ್ಟಿಪ್ಲೆಕ್ಸ್ನಲ್ಲಿ ಯಾವೊಂದು ಸಿನಿಮಾ ಮಧ್ಯರಾತ್ರಿ ರಿಲೀಸ್ ಆಗಿರಲಿಲ್ಲವಂತೆ, ಈಗ ದರ್ಶನ್ ಅಭಿನಯದ ಚಕ್ರವರ್ತಿ ಸಿನಿಮಾ ಮೊದಲ ಬಾರಿಗೆ 12 ಗಂಟೆಗೆ ಮಲ್ಟಿಪ್ಲೆಕ್ಸ್ನಲ್ಲಿ ಬಿಡುಗಡೆಯಾಗಿ ಹೊಸ ದಾಖಲೆ ನಿರ್ಮಿಸಿದೆ.

ಈ ನಡುವೆ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ಮೊದಲ ಬಾರಿಗೆ ಚಕ್ರವರ್ತಿ ಸಿನಿಮಾದಲ್ಲಿ ದರ್ಶನ್ ಅನ್ನು ಈ ರೀತಿ ತೋರಿಸಿದ್ದು, ಯಾವ ಹಾಲಿವುಡ್ ಸಿನಿಮಾಕ್ಕಿಂತ ನಮ್ಮ ಕನ್ನಡ ಸಿನಿಮಾ ಕಡಿಮೆ ಇಲ್ಲ ಎಂದು ಹೇಳಿದ್ದಾರೆ.

ಇನ್ನೂ ಕೆಲವರು ಸಿನಿಮಾ ಹಳೆ ಕತೆಯನ್ನು ಒಳಗೊಂಡಿದೆ, ಹಾಗಾಗಿ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ. ಗೆಳೆಯನಿಗೋಸ್ಕರ ಅಂಡರ್ವಲ್ಡ್ ಗೆ ಎಂಟ್ರಿ ನೀಡುವ ದರ್ಶನ್, ಯಾವ ರೀತಿಯಲ್ಲಿ ಇಡೀ ಭೂಗತ ಜಗತ್ತನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ ಎನ್ನುವುದರ ಸುತ್ತ ಕಥೆ ಸುತ್ತಿದೆ.

ಸಿನಿಮಾವನ್ನು ಮನೆ ಮಂದಿ ಕುಳಿತುಕೊಂಡು ನೋಡಬಹುದಾಗಿದೆ ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದಾರೆ. ಚಿತ್ರದಲ್ಲಿ ದರ್ಶನ್ ಮೂರು ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಂಡಿದ್ದು, ಅದರ ಹಿನ್ನೆಲೆಯನ್ನು ನೀವು ಸಿನಿಮಾ ನೋಡಿ ತಿಳಿದುಕೊಳ್ಳಬೇಕು.

ಇದೇ ಮೊದಲ ಬಾರಿಗೆ ದರ್ಶನ್ ಸಹೋದರ ದಿನಕರ್ ತೂಗುದೀಪ ಖಳನಟನ ಪಾತ್ರದಲ್ಲಿ ಬಣ್ಣ ಹಚ್ಚಿದ್ದು ಸಹೋದರನ ಮುಂದೆ ಖಡಕ್ ಆಗಿ ನಿಂತು ಅಭಿನಯ ಮಾಡಿದ್ದಾರೆ ಎನ್ನುವುದು ಸಿನಿಮಾ ನೋಡಿದರ ಮಾತಾಗಿದೆ. ದೀಪಾ ಸನ್ನಿಧಿ ಚಿತ್ರದ ನಾಯಕಿಯಾಗಿದ್ದು, ಕುಮಾರ್ ಬಂಗಾರಪ್ಪ, ಆದಿತ್ಯ, ಸೃಜನ್ ಲೋಕೇಶ್ ಸೇರಿದಂತೆ ಹಲವು ಸ್ಟಾರ್ ನಟರು ನಟಿಸಿದ್ದಾರೆ.

ಬಾಕ್ಸ್ ಆಫಿಸ್ ಸುಲ್ತಾನ್ ಎಂದು ಕರೆಸಿಕೊಳ್ಳುವ ದರ್ಶನ್ಗೆ ಈ ಹಿಂದಿನ ಸಿನಿಮಾಗಳು ನಿರೀಕ್ಷಿತ ಮಟ್ಟದಲ್ಲಿ ಗೆಲುವು ತಂದುಕೊಟ್ಟಿಲ್ಲ. ಹಾಗಾಗೀ ದರ್ಶನ್ಗೆ ಚಕ್ರವರ್ತಿ ಸಿನಿಮಾ ಗೆಲ್ಲಲೇಬೇಕಾದ ಅನಿವಾರ್ಯತೆ ಇದ್ದು, ಮುಂದಿನ ದಿವಸದಲ್ಲಿ ಪ್ರೇಕ್ಷಕ ಯಾವ ರೀತಿ ಸಿನಿಮಾವನ್ನು ಕಾಣುತ್ತಾನೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Courtesy: News Now kannada

Facebook Auto Publish Powered By : XYZScripts.com