ಚಕ್ರವರ್ತಿ’ ಚಕ್ರಾಧಿಪತ್ಯ: ಮತ್ತೆ ‘ಬಾಕ್ಸ್ ಆಫೀಸ್ ಸುಲ್ತಾನ್’ ಆದ ದರ್ಶನ್

ನಿಮ್ಮೆಲ್ಲರ ಪ್ರೀತಿಯ ‘ದಾಸ’ ದರ್ಶನ್ ಅಭಿನಯದ ಈ ವರ್ಷದ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ‘ಚಕ್ರವರ್ತಿ’ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. 400ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿದೆ ಎನ್ನಲಾಗಿರುವ ‘ಚಕ್ರವರ್ತಿ’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೆ ಲೂಟಿ ಮಾಡುತ್ತಿದೆ.

ಏಪ್ರಿಲ್ 14 ರಂದು ರಿಲೀಸ್ ಆದ ‘ಚಕ್ರವರ್ತಿ’ ಸಿನಿಮಾ, ಮೊದಲ ದಿನ ದಾಖಲೆ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ಯಂತೆ. ಹಾಗಂತ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ಹೇಳಿ ಕೇಳಿ.. ಏಪ್ರಿಲ್ 14 ಅಂಬೇಡ್ಕರ್ ಜಯಂತಿ. ರಜೆ ದಿನದಂದು ‘ಚಕ್ರವರ್ತಿ’ ರಿಲೀಸ್ ಆಗಿದ್ರಿಂದ ಸ್ಯಾಂಡಲ್ ವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ್ಯಂತೆ. ಹಾಗಾದ್ರೆ, ‘ಚಕ್ರವರ್ತಿ’ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು.?

‘ಚಕ್ರವರ್ತಿ’ಯ ಆರ್ಭಟಕ್ಕೆ ಬಾಕ್ಸ್ ಆಫೀಸ್ ಛಿದ್ರ ಛಿದ್ರವಾಗಿದ್ಯಂತೆ. ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಮೊದಲ ದಿನ ‘ಚಕ್ರವರ್ತಿ’ ಕೊಳ್ಳೆ ಹೊಡೆದಿರುವುದು ಬರೋಬ್ಬರಿ 12.45 ಕೋಟಿ.!

ಮೊದಲ ದಿನ 12.45 ಕೋಟಿ ಕಲೆಕ್ಷನ್ ಮಾಡಿರುವ ‘ಚಕ್ರವರ್ತಿ’…. ‘ಹೆಬ್ಬುಲಿ’ ಹಾಗೂ ‘ರಾಜಕುಮಾರ’ ಚಿತ್ರಗಳ ದಾಖಲೆಗಳನ್ನ ಪುಡಿ ಪುಡಿ ಮಾಡಿದ್ಯಂತೆ. ಇದೇ ಕಾರಣಕ್ಕೆ ‘ಡಿ’ ಬಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
‘ಚಕ್ರವರ್ತಿ’ ಚಿತ್ರ ಮೊದಲ ದಿನ 12.45 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂಬ ಸುದ್ದಿ ಫೇಸ್ ಬುಕ್ ನಲ್ಲಿ ಹರಿದಾಡುತ್ತಿದೆ ನಿಜ. ಆದ್ರೆ, ಇದನ್ನ ಚಿತ್ರತಂಡ ಕನ್ಫರ್ಮ್ ಮಾಡಿಲ್ಲ. ‘ಚಕ್ರವರ್ತಿ’ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಭೂಗತಲೋಕದ ಕಥೆಯ ಜೊತೆಗೆ ದೇಶಪ್ರೇಮ ಬೆರೆತಿರುವ ‘ಚಕ್ರವರ್ತಿ’ ಚಿತ್ರವನ್ನ ಮಾಸ್ ಅಥವಾ ಕ್ಲಾಸ್ ಎಂಬ ಭೇದಭಾವ ಇಲ್ಲದೆ, ಎಲ್ಲರೂ ನೋಡಿ ಎಂಜಾಯ್ ಮಾಡಬಹುದು. ‘ಚಕ್ರವರ್ತಿ’ ಚಿತ್ರದ ವಿಮರ್ಶೆ ಇಲ್ಲಿದೆ… ಓದಿರಿ..
Courtesy: Filmibeat

Facebook Auto Publish Powered By : XYZScripts.com