‘ಚಕ್ರವರ್ತಿ’ಯ ದರ್ಶನಕ್ಕೂ ಮುನ್ನ ನೀವು ಗಮನಿಸಬೇಕಾದ ವಿಶೇಷತೆಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರ ನಾಳೆ (ಏಪ್ರಿಲ್ 14) ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ತಮ್ಮ ನೆಚ್ಚಿನ ನಟನ ಸಿನಿಮಾವನ್ನ ಫಸ್ಟ್ ಡೇ, ಫಸ್ಟ್ ಶೋ ನೋಡ್ಬೇಕು ಅಂತ ತುದಿಗಾಲಲ್ಲಿ ಕಾಯ್ತಿದ್ದಾರೆ ಅಭಿಮಾನಿಗಳು.

ಅಷ್ಟಕ್ಕೂ, ಬಿಡುಗಡೆಗೂ ಮುಂಚೆ ‘ಚಕ್ರವರ್ತಿ’ ಇಷ್ಟೊಂದು ಕ್ರೇಜ್ ಹುಟ್ಟುಹಾಕಲು ಕಾರಣವೇನು? ‘ಚಕ್ರವರ್ತಿ’ಯನ್ನ ಫಸ್ಟ್ ಶೋನೇ ನೋಡಲೇಬೇಕು ಎನ್ನುವುದಕ್ಕೆ ಕುತೂಹಲ ಮೂಡಿಸಿರುವ ಅಂಶಗಳೇನು? ‘ಚಕ್ರವರ್ತಿ’ ಚಿತ್ರದಲ್ಲಿ ಗಮನ ಸೆಳೆಯುವ ವಿಶೇಷತೆಗಳೇನು?

ಇಲ್ಲಿದೆ ನೋಡಿ ‘ಚಕ್ರವರ್ತಿ’ಯ ಅಬ್ಬರ ಹೆಚ್ಚಾಗುವಂತೆ ಮಾಡಿದ ಇಂಟ್ರೆಸ್ಟಿಂಗ್ ಅಂಶಗಳು…..ಮುಂದೆ ಓದಿ….

ದರ್ಶನ್ ಎಂಬ ಒಂದು ಹೆಸರು ಸಾಕು ‘ಚಕ್ರವರ್ತಿ’ ಸಿನಿಮಾ ನೋಡೊದಕ್ಕೆ. ಯಾಕಂದ್ರೆ, ಪ್ರತಿಯೊಂದು ಚಿತ್ರಗಳ ಮೂಲಕವೇ ಕನ್ನಡ ಪ್ರೇಕ್ಷಕರನ್ನ ಮನರಂಜನಿಸುತ್ತಿರುವ ನಟ ದರ್ಶನ್. ಹೀಗಾಗಿ, ಈ ಚಿತ್ರದಲ್ಲೂ ದರ್ಶನ್ ಅವರ ಅಭಿನಯ, ಡೈಲಾಗ್, ಫೈಟ್ಸ್, ಡ್ಯಾನ್ಸ್ ಇಷ್ಟವಾಗುವುದ್ರಲ್ಲಿ ಯಾವುದೇ ಅನುಮಾನವಿಲ್ಲ.

‘ಚಕ್ರವರ್ತಿ’ ಸಿನಿಮಾ ವಿಶೇಷವೆನಿಸಿಕೊಂಡಿರುವುದೇ ಕಥೆಯ ವಿಚಾರಕ್ಕೆ. ಮೂರು ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನ ಒಂದೇ ಸಿನಿಮಾದಲ್ಲಿ ತೋರಿಸುತ್ತಿದ್ದಾರೆ. ’80’ರ ದಶಕದಿಂದ ಇಂದಿನವರೆಗೂ ಮೂರು ವಿಭಿನ್ನ ಹಂತದಲ್ಲಿ ಚಿತ್ರಕಥೆ ಮಾಡಲಾಗಿದೆಯಂತೆ. ರೌಡಿಸಂ ಕಥೆ ಹೊಂದಿದ್ದರು, ಅದರ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್ ಇದೆಯಂತೆ. ಮತ್ತೊಂದು ಆಸಕ್ತಿಕರ ಸಂಗತಿ ಅಂದ್ರೆ, ‘ಚಕ್ರವರ್ತಿ’ಯಲ್ಲಿ ದೇಶಪ್ರೇಮದ ಕಥೆ ಕೂಡ ಮೂಡಿ ಬಂದಿದೆಯಂತೆ.

‘ಚಕ್ರವರ್ತಿ’ ಹೆಚ್ಚು ನಿರೀಕ್ಷೆ ಹುಟ್ಟುಹಾಕಿರುವುದೇ ದರ್ಶನ್ ಅವರ ಗೆಟಪ್ ಗಳ ವಿಚಾರದಲ್ಲಿ. ಮೂರು ವಿಭಿನ್ನ ಚಿತ್ರಕಥೆಯನ್ನ ಹೊಂದಿರುವ ಸಿನಿಮಾದಲ್ಲಿ ದರ್ಶನ್ ಅವರು ಕೂಡ ಮೂರು ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಸ್ಟೈಲ್ ನಲ್ಲಿ ಲವರ್ ಬಾಯ್ ಹಾಗೂ ಲಾಂಗ್, ಗನ್ ಹಿಡಿದು ಮಿಂಚಿದ್ರೆ, ಮತ್ತೊಂದು ಗೆಟಪ್ ನಲ್ಲಿ ಸೂಟು ಬೂಟು ತೊಟ್ಟು ಕೈಯಲ್ಲಿ ಮಿನಿ ಸೂಟುಕೇಸ್ ಹಿಡಿದು ಕುತೂಹಲ ಮೂಡಿಸಿದ್ದಾರೆ.

ಇದೇ ಮೊದಲ ಬಾರಿಗೆ ದರ್ಶನ್ ಸಹೋದರ ದಿನಕರ್ ತೂಗೂದೀಪ ‘ಚಕ್ರವರ್ತಿ’ ಚಿತ್ರದ ಮೂಲಕ ಬಣ್ಣ ಹಚ್ಚಿದ್ದು, ಸ್ಯಾಂಡಲ್ ವುಡ್ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ನಿರ್ದೇಶಕ, ನಿರ್ಮಾಪಕ, ವಿತರಕನಾಗಿ ತೆರೆಹಿಂದೆ ಕಮಾಲ್ ಮಾಡುತ್ತಿದ್ದ ದಿನಕರ್ ಈಗ ಸ್ಕ್ರೀನ್ ಮೇಲೂ ಅಬ್ಬರಿಸಲಿದ್ದಾರೆ.

‘ಚಕ್ರವರ್ತಿ’ ಸಿನಿಮಾದಲ್ಲಿ ದಿನಕರ್ ತೂಗುದೀಪ ಅಭಿನಯಿಸಿರುವುದು ವಿಶೇಷವೇ. ಆದ್ರೆ, ಈ ಚಿತ್ರದಲ್ಲಿ ದಿನಕರ್, ದರ್ಶನ್ ಅವರ ಎದುರು ವಿಲನ್ ಆಗಿ ತೊಡೆ ತಟ್ಟಿದ್ದಾರೆ ಎಂಬುದು ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಯಲ್ಲಿ ದೀಪಾ ಸನ್ನಿಧಿ ಅಭಿನಯಿಸಿರುವುದು ‘ಚಕ್ರವರ್ತಿ’ ಚಿತ್ರದ ವಿಶೇಷತೆಗಳಲ್ಲಿ ಒಂದು. ಈ ಹಿಂದೆ ದರ್ಶನ್ ಅಭಿನಯದ ‘ಸಾರಥಿ’ ಚಿತ್ರದ ಮೂಲಕ ದೀಪಾ ಸನ್ನಿಧಿ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಈಗ ‘ಸಾರಥಿ’ ನಂತರ ಎರಡನೇ ಬಾರಿ ದರ್ಶನ್ ಜೊತೆ ಅಭಿನಯಿಸಿದ್ದು, ಇವರಿಬ್ಬರ ಜೋಡಿ ಮೇಲೆ ಎಕ್ಸ್ ಪೆಕ್ಟೇಶನ್ ಹೆಚ್ಚಿದೆ.

‘ಚಕ್ರವರ್ತಿ’ ಬಹುದೊಡ್ಡ ತಾರಬಳಗವಿದೆ. ದರ್ಶನ್ ಅವರ ಜೊತೆಯಲ್ಲಿ ಕನ್ನಡ ಪ್ರಮುಖ ನಟರು ಅಭಿನಯಿಸಿದ್ದಾರೆ. ದಿನಕರ್ ತೂಗೂದೀಪ್, ಆದಿತ್ಯ, ಕುಮಾರ್ ಬಂಗಾರಪ್ಪ, ಚಾರುಲತಾ, ಸೃಜನ್ ಲೋಕೇಶ್, ಶರತ್ ಲೋಹಿತಾಶ್ವ, ಯಶಸ್ಸು ಸೂರ್ಯ ಹಾಗೂ ‘ಚಕ್ರವರ್ತಿ’ ಚಿತ್ರದ ನಿರ್ಮಾಪಕ ಸಿದ್ದಾಂತ್ ಸೇರಿದಂತೆ ಇನ್ನು ಹಲವು ಕಲಾವಿದರು ತೆರೆ ಹಂಚಿಕೊಂಡಿದ್ದಾರೆ. ಹೀಗಾಗಿ, ‘ಚಕ್ರವರ್ತಿ’ ಸಿನಿಮಾದಲ್ಲಿ ತಾರೆಗಳ ಹಬ್ಬವಾದ್ರೂ ಅಚ್ಚರಿಯಿಲ್ಲ.

‘ಚಕ್ರವರ್ತಿ’ ಚಿತ್ರದ ವಿಶೇಷತೆಗಳಲ್ಲಿ ಸಂಗೀತ ಮುಖ್ಯವಾದದು. ಇಷ್ಟು ದಿನ ದರ್ಶನ್ ಸಿನಿಮಾಗಳಿಗೆ ಹರಿಕೃಷ್ಣ ಸಂಗೀತ ನೀಡುತ್ತಿದ್ದರು. ಆದ್ರೆ, ಇದೇ ಮೊದಲ ಬಾರಿಗೆ ಅರ್ಜುನ್ ಜನ್ಯ ದರ್ಶನ್ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಈಗಾಗಲೇ ‘ಚಕ್ರವರ್ತಿ’ಯ ಹಾಡುಗಳು ಸೂಪರ್ ಹಿಟ್ ಆಗಿದ್ದು, ಆ ಹಾಡುಗಳು ಪರದೆ ಮೇಲೆ ಹೇಗೆ ಮೂಡಿಬಂದಿದೆ ಅಂತ ನೋಡಬೇಕಿದೆ.

‘ಚಕ್ರವರ್ತಿ’ಯ ಇಷ್ಟೆಲ್ಲ ವಿಶೇಷತೆಗಳ ನಿಜವಾದ ರೂವಾರಿ ಚಿತ್ರದ ನಿರ್ದೇಶಕ ಚಿಂತನ್. ಇಷ್ಟು ದಿನ ದರ್ಶನ್ ಸಿನಿಮಾಗಳಿಗೆ ಸಂಭಾಷಣೆ ಬರೆಯುತ್ತಿದ್ದ ಚಿಂತನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ‘ಚಕ್ರವರ್ತಿ’ಯನ್ನ ನೋಡಲೇಬೇಕು ಎಂಬುದಾದರೇ ದರ್ಶನ್ ಸಿನಿಮಾಗೆ ಚಿಂತನ್ ಅವರ ನಿರ್ದೇಶನ ಹೇಗಿರಲಿದೆ ಎಂಬುದು ಕೂಡ ಕಾರಣವಾಗಲಿದೆ.

Courtesy: filmi beat

Facebook Auto Publish Powered By : XYZScripts.com