ಚಂದನವನದಲ್ಲಿ ಈ ವಾರ ಆರು ಚಿತ್ರಗಳು ತೆರೆಗೆ ಯಾವ ಯಾವ ಚಿತ್ರ?.. ಇಲ್ಲಿ ಓದಿ

ಕಳೆದ ಕೆಲವು ವಾರಗಳಿಂದ ಚಂದನವನದಲ್ಲಿ ಪ್ರತಿ ಶುಕ್ರವಾರವೂ ಐದಾರು ಸಿನಿಮಾಗಳು ತೆರೆಗೆ ಬರುತ್ತಿವೆ. ಕಳೆದ ವರ್ಷದ ಅಕ್ಟೋಬರ್-ನವೆಂಬರ್‌ ನಲ್ಲಿ ಹೀಗೆ ವಾರಕ್ಕೆ ಆರೇಳು ಚಿತ್ರಗಳು ಬಿಡುಗಡೆಯಾಗಿ ಮಕಾಡೆ ಮಲಗಿದ್ದ ಉದಾ ಹರಣೆ ನಮ್ಮ ಕಣ್ಮುಂದೆ ಇದೆ. ಆದರೂ ಆ ಪರಿಪಾಠ ಮಾತ್ರ ಇನ್ನೂ ಮರೆ ಯಾಗಿಲ್ಲ. ಅಂತೆಯೇ ಈ ವಾರವೂ ತೆರೆಗೆ ಬರಲಿದೆ ಐದು ಅವುಗಳ ಡೀಟೈಲ್ಸ್ ಇಲ್ಲಿದೆ.

‘ತುಂತುರು’
ಕುಮಾರ್ ಮೂವೀಸ್ ಲಾಂಛನದಲ್ಲಿ ಸೋಮಶೇಖರ್, ವಿ.ಕುಮಾರ್, ಮಂಜು ಎಸ್. ಪಾಟೀಲ್ ಹಾಗೂ ಸತ್ಯಸಾಮ್ರಾಟ್ ಜಂಟಿ ಯಾಗಿ ನಿರ್ಮಿಸಿರುವ ‘ತುಂತುರು’ ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಮುಸ್ಸಂಜೆ ಮಹೇಶ್ ಸಂಭಾ ಷಣೆ ಬರೆದು ನಿರ್ದೇಶಿ ಸಿರುವ ಚಿತ್ರಕ್ಕೆ ನಾಗೇಶ್ ಆಚಾರ್ಯ ಅವರ ಛಾಯಾಗ್ರಹ ಣ, ಶ್ರೀಧರ್ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಫೈವ್‌ಸ್ಟಾರ್ ಗಣೇಶ್‌ರ ನೃತ್ಯ ನಿರ್ದೇಶನವಿದೆ. ರಮೇಶ್ ಅರವಿಂದ್, ಅನು ಪ್ರಭಾಕರ್, ಸೋಮಶೇಖರ್, ರಿಷಿಕಾ ಸಿಂಗ್ ಮುಂತಾದ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

‘ಜನ ಗಣ ಮನ’
ವಿ.ಐ.ಪಿ. ಸಿನಿಮಾಸ್ ಲಾಂಛನದಲ್ಲಿ ಸಾಂಬಶಿವಾ ರೆಡ್ಡಿ ನಿರ್ಮಾಣದ ‘ಜನ ಗಣ ಮನ’ ಚಿತ್ರವು ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಶಶಿಕಾಂತ್ ಆನೇಕಲ್ ನಿರ್ದೇಶನದ ಈ ಚಿತ್ರಕ್ಕೆ ಕಥೆಯನ್ನು ಕೋರಾ ನಾಗೇಶ್ವರ ರಾವ್ ಬರೆದಿದ್ದಾರೆ. ಛಾಯಾ ಗ್ರಹಣವನ್ನು ಗೌರಿ ವೆಂಕಟೇಶ್, ಸಂಗೀತವನ್ನು ಗೌತಮ್ ಶ್ರೀವತ್ಸ, ಸಾಹಸ- ಡಿಫರೆಂಟ್ ಡ್ಯಾನಿ, ಚಂದ್ರು, ನೃತ್ಯ ನಿರ್ದೇಶನ ವನ್ನು ಹೈಟ್ ಮಂಜು, ಕೋ ಡೈರೆಕ್ಟರ್ ಕಡೂರು ಶಿವು, ಉರವ್ ಅವರ ಸಂಕ ಲನ, ಕಲಾ ನಿರ್ದೇಶಕರಾಗಿ ಸುಂದರ್ ಹಾಗೂ ರಾಮು ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ಆಯಿಷಾ, ರವಿಕಾ ಳೆ, ರಾಮಕೃಷ್ಣ, ಕಾವೇರಪ್ಪ, ಮಾನಸ್ವಿ, ಕಾಮನ, ರಘುನಾಥ್ ಯಾದವ್, ಎ.ಕೆ.ರಾಮು, ಸೌಂದರ್ಯ, ಕುಮುದ, ಸೌಮ್ಯ, ಮುಂತಾದವರು ಅಭಿನಯಿಸಿದ್ದಾರೆ.

‘ಶಂಖನಾದ’
ಶ್ರೀ ಸಿದ್ದರಾಮೇಶ್ವರ ಫಿಲಂಸ್ ಲಾಂಛನದಲ್ಲಿ ವಿಜಯಾ ರೆಡ್ಡಿ ಎಸ್.ಚೌಧರಿ ನಿರ್ಮಾಣದ ಥ್ರಿಲ್ಲರ್ ಮತ್ತು ಸಸ್ಪೆನ್‌ಸ್ ಕಥಾ ವಸ್ತುವುಳ್ಳ ಚಿತ್ರ‘ಶಂಖನಾದ’ ಈ ವಾರ ಬಿಡುಗಡೆ ಆಗುತ್ತಿದೆ. ನಿರ್ದೇಶನವನ್ನು ವಿಶ್ವನಾಥ ಬಸಪ್ಪ ಕಾಳಗಿ ಮಾಡಿದ್ದಾರೆ. ವಿನು ಮನಸು ಸಂಗೀತ ಸಂಯೋಜನೆ, ಸಂಕಲನವನ್ನು ಸತೀಶ್ ಚಂದ್ರಯ್ಯ, ನಕಲ ಟಿ ದಾಂಡೇಕರ್ ಮತ್ತು ಮಂಜುನಾಥ್ ಜಗದೀಶ ಗೌಡರ ಛಾಯಾಗ್ರಹಣ, ಹೈಟ್ ಮಂಜು ನೃತ್ಯ ನಿರ್ದೇಶನ, ರಂಜಿತ್ ಮತ್ತು ಎಸ್.ಆರ್.ಪಿ. ಸಹನಿರ್ದೇಶನ ಈ ಚಿತ್ರಕ್ಕಿದೆ.  ಶಾಂತರೆಡ್ಡಿ ಪಾಟೀಲ್, ನಯನ, ನಂ. ಶ್ರೀನಿವಾಸ, ಶ್ರೀ, ರಶ್ಮಿತಾ, ಅಶೋಕ್ ಕಂಬಳಿ, ಸಿದ್ದಾರ್ಥ ಕೆ., ರಾಜಾರಾಂ, ಶಂಕರ್ ಪ್ರಮುಖ ತಾರಾಬಳಗದಲ್ಲಿದ್ದಾರೆ. ಬಾಗಲಕೋಟೆ, ಗದಗ, ಚಿಕ್ಕಮಗಳೂರಿನಲ್ಲಿ ನಡೆದಿದೆ.

ಕಂತ್ರಿ ಬಾಯ್ಸ್
ಚೆರಾಯನ್ಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಎಂ.ಸಿ.ಹೇಮಂತ್ ಗೌಡ ನಿರ್ಮಿಸಿರುವ ‘ಕಂತ್ರಿ ಬಾಯ್ಸ್’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಎಸ್.ರಾಜು ಚಟ್ನಳ್ಳಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿ ದ್ದಾರೆ. ಪಿ.ವಿ.ಆರ್.ಸ್ವಾಮಿ ಛಾಯಾಗ್ರಹಣ, ಕಿರಣ್ ಮಹದೇವ್ ಸಂಗೀತ ನಿರ್ದೇ ಶನ, ಡಿ.ರವೀಂದ್ರನಾಥ್ ಹಿನ್ನೆಲೆ ಸಂಗೀತ, ಕೆ.ಎನ್.ಕಾರ್ತಿಕ್ ಸಂಕಲ ನ, ಮನೋರತ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಗಡ್ಡಪ್ಪ, ಸುಮಂತ್ ಸೂರ್ಯ, ಜೋಕರ್ ಹನುಮಂತು, ಹೇಮಂತ್ ಗೌಡ, ದರ್ಶನ್ ರಾಜ್, ಹೇಮಂತ್ ಸೂರ್ಯ, ಆನಕ, ಸಂಧ್ಯಾ, ಶಾಲಿನಿ, ಸಂತೋಷ್, ವಾಸಂತಿ, ಭೂಪಾಲ್, ವೆಂಕ ಟಾಚಲ, ಪಟೇಲ್ ರಂಗಪ್ಪ ಮುಂತಾದವರು ಚಿತ್ರದಲ್ಲಿದ್ದಾರೆ.

ಮಿಸ್ಟರ್ ಎಲ್.ಎಲ್.ಬಿ.
ಹಳ್ಳಿ ಸೊಗಡಿನಲ್ಲಿ ನಡೆಯುವ ಪ್ರೀತಿ ಪ್ರೇಮದೊಂದಿಗೆ ಹಾಸ್ಯಾನಕ ಕಥಾ ಹಂದರ ಹೊಂದಿರುವ ‘ಮಿಸ್ಟರ್ ಎಲ್.ಎಲ್.ಬಿ.’ ಚಿತ್ರವು ಈ ವಾರ ರಾಜ್ಯಾ ದ್ಯಂತ ಬಿಡುಗಡೆಯಾಗುತ್ತಿದೆ.  ಆರ್.ವಿ. ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾ ಣವಾಗಿರುವ ಈ ಚಿತ್ರವನ್ನು ರಘುವರ್ಧನ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸಿ ದ್ದಾರೆ. ವರ್ಗದಲ್ಲಿ ಸುರೇಶ್ ಬಾಬುರ ಛಾಯಾಗ್ರಹಣ, ಮಂಜು ಚರಣ್ ಸಂಗೀತ ಸಂಯೋಜನೆ, ರಾಜು ಬೆಳಗೆರೆ ಬರೆದ ಸಂಭಾಷಣೆ, ಕೆ.ಗಿರೀಶ್ ಕುಮಾರ್ ಸಂಕ ಲನ, ಗೌಸ್ ಪೀರ್, ಮಂಜು ಚರಣ್ ಅವರುಗಳ ಸಾಹಿತ್ಯ, ಕಲೈ ಮಾಸ್ಟರ್ ಮತ್ತು ತ್ರಿಭುವನ್ ನೃತ್ಯ ನಿರ್ದೇಶನವಿದೆ. ಶಿಶಿರಾ, ಲೇಖಚಂದ್ರ, ಸುಜಯ್ ಹೆಗಡೆ, ನಂದಿನಿ, ಕೆಂಪೇಗೌಡ, ಶ್ರೀನಿವಾಸ ಗೌಡರು, ಗಿರೀಶ್ ಜತ್ತಿ, ಬೆಂಗಳೂರು ನಾಗೇಶ್, ಶಾಂತ ಆಚಾರ್ಯ, ನಾರಾಯಣ ಸ್ವಾಮಿ, ಡೈಮಂಡ್ ರಾಜಣ್ಣ, ಡಾ. ಸೋಮ ಶೇಖರ್ ತಾರಾಬಳಗದಲ್ಲಿದ್ದಾರೆ.

‘ಗೂಗಲ್’

ಒಂದು ವಿನೂತನ ಕಥಾ ವಸ್ತು ಇಟ್ಟುಕೊಂಡು ಈ ವಾರ ಹೊರಬರುತ್ತಿರುವ ಚಿತ್ರ ‘ಗೂಗಲ್’. ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ, ನಟನೆ ಹಾಗೂ ನಿರ್ಮಾಣವನ್ನು ಮಾಡಿದ್ದಾರೆ ಡಾ. ವಿ. ನಾಗೇಂದ್ರ ಪ್ರಸಾದ್. ಇದುವರೆಗೂ ತೆರೆಯ ಮೇಲೆ ಹೇಳದೇ ಇರುವ ವಸ್ತುವನ್ನೇ ನಾಗೇಂದ್ರ ಪ್ರಸಾದ್ ತಂದಿದ್ದಾರೆ. ಇದು 2000 ಇಸವಿಯಲ್ಲಿ ನಡೆದ ಘಟನೆ. ಅದರಲ್ಲಿ ನಾಗೇಂದ್ರ ಪ್ರಸಾದ್ ಸಹ ಭಾಗಿಯಾಗಿದ್ದರು.

ಚಿತ್ರಕ್ಕೆ ‘ಈ ಭೂಮಿ ಬಣ್ಣದ ಬುಗುರಿ’ ಎಂಬ ಬರಹವೂ ಇದೆ. ಜೀವನದ ಹಲವು ಮಗ್ಗುಲುಗಳನ್ನು ಚಿತ್ರದ ಮೂಲಕ ಅವರು ಹೇಳಿದ್ದಾರೆ. ಪ್ರಸಾದ್‌ಗೆ ಜೋಡಿಯಾಗಿ ಶುಭ ಪೂಂಜಾ ನಟಿಸಿದ್ದಾರೆ. ಉಳಿದಂತೆ ಬೇಬಿ ವೈಷ್ಣವಿ, ದೀಪಕ್, ಅಮೃತ ರಾವ್, ಶೋಭರಾಜ್, ಸಂಪತ್, ಜೈ ದೇವ್, ಕೃಷ್ಣಮೂರ್ತಿ ಮುಂತಾದವರು ಅಭಿನಯಿಸಿದ್ದಾರೆ.  ಉತ್ಸವ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಾಗೇಂದ್ರ ಪ್ರಸಾದ್ ಜತೆ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿದ್ದು ಅಶ್ವಥ್ ಹಾಗೂ ಶ್ರೀಧರ್. ಕೆ.ಎಂ. ಪ್ರಕಾಶ್‌ರ ಸಂಕಲನ, ನಾಗರ್ಜುನ್ ಅವರ ಛಾಯಾಗ್ರಹಣವಿದೆ. ಉಳಿದ ತಂತ್ರಜ್ಞಾರಾಗಿ ಉಪ್ಪಿ, ಕೋಟ ವೆಂಕಟೇಶ್, ಸತೀಶ್ ಬಾಬು, ಇಮ್ರಾನ್ ಸರ್ದಾರಿಯ, ಕಲೈ, ಹರಿಕೃಷ್ಣ, ಕಂಬಿ ರಾಜು, ಅನಿಲ್ ಸಿ.ಜೆ. ಮೊದಲಾದವರು ಕಾರ್ಯ ನಿರ್ವಹಿಸಿದ್ದಾರೆ.

Facebook Auto Publish Powered By : XYZScripts.com