ಚಂದನವನಕ್ಕೆ ನಿಖಿತಾ ರೀ ಎಂಟ್ರಿ, ಯಾವ ಚಿತ್ರ ಗೊತ್ತಾ?

ನಿಖಿತಾ ತುಕ್ರಾಲ್ ಗೊತ್ತಲ್ಲಾ, ಸುದೀಪ್ ಅವರ ಮಹಾರಾಜ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟು, ಪುನೀತ್ ಜೊತೆಗೆ “ವಂಶಿ” ಚಿತ್ರದಲ್ಲಿ ನಟಿಸಿದ್ದರು. ನಂತರ ಯೋಧ, ಮುಕುಂದ ಮುರಾರಿ ಚಿತ್ರಗಳಲ್ಲಿ ನಟಿಸಿದ್ದರು. ತದನಂತರ ಒಂದಿಷ್ಟು ಗಾಸಿಪ್ ಗಳಿಗೂ ಆಹಾರವಾಗಿದ್ದರು. ಅಲ್ಲಿಂದ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿರಲಿಲ್ಲ.

ರಾಜಾಸಿಂಹ ಚಿತ್ರದ ಮೂಲಕ ನಟ ಅನಿರುದ್ದ ಸೇರಿದಂತೆ, ನಟಿ ನಿಖಿತಾ ತುಕ್ರಾಲ್ ಸಹ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಇವತ್ತು ಈ ಚಿತ್ರ ತೆರೆ ಕಂಡಿದೆ. ಇವರೊಂದಿಗೆ ಗಂಡ ಹೆಂಡತಿ ಸಂಜನಾ ಸಹ ಅಭಿನಯಿಸಿದ್ದಾರೆ.

ರಾಜಾಸಿಂಹನ ಮೂಲಕ ಚಂದನವನಕ್ಕೆ ನಿಖಿತಾ ರೀ ಎಂಟ್ರಿ

Facebook Auto Publish Powered By : XYZScripts.com