ಗೌರಿ ಗಣೇಶ ಹಬ್ಬಕ್ಕೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ ರಾಜ್ ವಿಷ್ಣು ಜೋಡಿ

ಇತ್ತೀಚೆಗಷ್ಟೇ ಹೈ ಟೆಕ್ನಾಲಜಿ , 7.1 ಡಿಜಿಟಸಲ್ ಸೌಂಡ್​​​​​​​​​​​​​​​​​​​​​ನಲ್ಲಿ ತಯಾರಾಗಿ ರಿ ರಿಲೀಸ್ ಆದ ನಾಗರಹಾವು ಸಿನಿಮಾ ಭಾರಿ ಸದ್ದು ಮಾಡಿತ್ತು.

ಈಗ ಡಾ,ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಗಂಧದ ಗುಡಿ’ ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗುತ್ತಿದ್ದು. ಸೆ.13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾವನ್ನು ಎಂಪಿ ಶಂಕರ್ ತಮ್ಮ ಭರಣಿ ಸಂಸ್ಥೆಯ ಮೂಲಕ ನಿರ್ಮಾಣ ಮಾಡಿದ್ದರು. ಚಿತ್ರದಲ್ಲಿ ಡಾ.ರಾಜ್ ಕುಮಾರ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್. ಕಲ್ಪನಾ, ಎಂಪಿ ಶಂಕರ್ ನಟಿಸಿದ್ದರು. ಚಿತ್ರಕ್ಕೆ ರಾಜನ್ ನಾಗೇಂದ್ರ ಸಂಗೀತ ನೀಡಿದ್ದರು.

ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ಹಾಗೂ ಸಾಹಸ ಸಿಂಹ ವಿಷ್ಣುವರ್ಧನ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಈಗ ಅತ್ಯಾಧುನಿಕ ಡಿಜಿಟಲ್ ಸೌಂಡ್ ಹಾಗೂ ಡಿಜಿಟಲ್ ಕಲರ್ ಗ್ರೇಡಿಂಗ್ ತಂತ್ರಜ್ಞಾನದೊಂದಿಗೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Facebook Auto Publish Powered By : XYZScripts.com