ಗೋಲ್ಡನ್ ಸ್ಟಾರ್ ಬಗ್ಗೆ ಕಿಚ್ಚ ಏನಂಥ ಟ್ವೀಟ್ ಮಾಡದ್ರೂ ಗೊತ್ತೇ??

ಚೆಲ್ಲಾಟ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಸ್ಯಾಂಡಲ್ ವುಡ್ ನಲ್ಲಿ ಸಿನಿಪ್ರಿಯರಿಗೆ ಸೂಪರ್ ಹಿಟ್ ಸಿನಿಮಾ ನೀಡಿದರು. ವಿಷ್ಯ ಏನಪ್ಪ ಅಂದ್ರೆ ಗಣೇಶ್ ಸ್ಯಾಂಡಲ್ ವುಡ ಅಂಗಳಕ್ಕೆ ಎಂಟ್ರಿ ಕೊಟ್ಟು 11 ವರ್ಷ ಆಗಿದೆ.

ಗಣೇಶ್ ನಟಿಸಿದ ಮುಂಗಾರು ಮಳೆ ಸಿನಿಮಾವಂತೂ ಸೂಪರ್ ಹಿಟ್ ಆಯಿತು. ನಂತರ ಗಣೇಶ್ ಅವರ ಸ್ಟಾರ್ ಬದಲಾಯಿತು. ನಂತರ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಾಯಕನಾಗಿ ಮಿಂಚಿದರು. ನಂತರ ಗಾಳಿಪಟ ಹುಡುಗಾಟ,ಚೆಲುವಿನ ಚಿತ್ತಾರ ಸಿನಿಮಾ ಕೂಡ ಸ್ಯಾಂಡಲ್ ವುಡ್ ನಲ್ಲಿ ಬಹಳಾನೇ ಸದ್ದು ಮಾಡಿತ್ತು.

ಸ್ಯಾಂಡಲ್ ವುಡ್ ಅಂಗಳದಲ್ಲಿ 11 ವರ್ಷ ಪೂರೈಸಿರುವ ಗಣೇಶ್ ಅವರಿಗೆ ಸಿನಿಮಾ ನಟರು ಸ್ನೇಹಿತರು ವಿಶ್ ಮಾಡಿದ್ದಾರೆ. ಅಂತೆಯೇ ಕಿಚ್ಚ ಸುದೀಪ್ ಕೂಡ ಗಣೇಶ್ ಅವರಿಗೆ ವಿಶ್ ಮಾಡಿ ನೀವು ಅದ್ಬುತ ನಟ , ಮತ್ತಷ್ಟು ಯಶಸ್ಸು ಕೂಡ ನಿಮಗೆ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

 

Facebook Auto Publish Powered By : XYZScripts.com