ಗೋಲ್ಡನ್ ಸ್ಟಾರ್ ಆರೆಂಜ್ ಲುಕ್ ಹೇಗಿದೆ ಇಲ್ಲಿ ನೋಡಿ

ಚಮಕ್ ಚಿತ್ರದ ಯಶಸ್ಸಿನ ನಂತರ ನಟ ಗೋಲ್ಡನ್ ಸ್ಟಾರ್ ಗಣೇಶ ಅಭಿನಯಿಸುತ್ತಿರುವ “ಆರೆಂಜ್” ಚಿತ್ರದ ಗಣೇಶ್ ಅವರ ಆರೆಂಜ್ ಲುಕ್ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಸೌಂಡು ಮಾಡುತ್ತಿದೆ. ಇದು ಗೋಲ್ಡನ್ ಸ್ಟಾರ್ ಹಾಗೂ ಪ್ರಶಾಂತ್ ರಾಜ್ ಜೋಡಿಯ “ಜೂಮ್ ” ನಂತರದ ಎರಡನೇ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ಗಣಿಗೆ ಜೋಡಿಯಾಗಿ ಪ್ರಿಯಾ ಆನಂದ ನಟಿಸುತ್ತಿದ್ದಾರೆ.

ಗೋಲ್ಡನ್ ಸ್ಟಾರ್ ಗಣೇಶ್ ಆರೆಂಜ್ ಲುಕ್ ಆಸಮ್.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿಗಳ ಮದುವೆಯ ದಿನದಂದು ಈ ಚಿತ್ರದ ಮುಹೂರ್ತ ನಡೆದಿತ್ತು. ಸದ್ಯ ಹೈದರಾಬಾದ್ ನಲ್ಲಿ ಚಿತ್ರದ ಶೂಟಿಂಗ್ ಬರದಿಂದ ಸಾಗುತ್ತಿದ್ದು ಈಗಾಗಲೇ ಈ ಚಿತ್ರ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.

ಅದ್ದೂರಿ ವೆಚ್ಚದಲ್ಲಿ ಮೂಡಿ ಬರುತ್ತಿರುವ ಆರೆಂಜ್ ಚಿತ್ರವು ಪ್ರಶಾಂತ್ ರಾಜ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿದೆ. ಹಾಗೂ ಸಂತೋಷ್ ರೈ ಪಾತಾಜಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ

Facebook Auto Publish Powered By : XYZScripts.com