ಗೊಲ್ಡನ್ ಗಂಡು, ಸಿಂಡ್ರೆಲ್ಲಾ ಸುಂದರಿ ; ಅರತಕ್ಷತೆಗೆ ರಾಯಲ್ ಲುಕ್,

ಕನ್ನಡ ಚಿತ್ರರಂಗದ ರಾಯಲ್ ಜೋಡಿ ಇವರು. ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ ವಿವಾಹ ಸಮಾರಂಭ ವೈಭೋವೋಪೇತ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾಗುತ್ತಿದೆ. ಮೂರು ದಿನಗಳ ವಿವಾಹದ ಸರಣಿ ಸಮಾರಂಭಗಳು ಕನ್ನಡ ಚಿತ್ರೋಧ್ಯಮದಲ್ಲಿ ಹಿಂದೆಂದಿಗಿಂತಲೂ ಅದ್ದೂರಿ ಸಡಗರಕ್ಕೆ ಸಾಕ್ಷಿಯಾಗುತ್ತಿದೆ. ಶುಕ್ರವಾರ ಬೆಂಗಳೂರಿನ ತಾಜ್ ವೆಸ್ಡೆಂಡ್ ನಲ್ಲಿ ಮುಹೂರ್ತ ನೆರವೇರಿದರೆ, ಅರಮನೆ ಮೈದಾನದಲ್ಲಿ ವಾರಾಂತ್ಯ ದಿನಗಳಾದ ಶನಿವಾರ ಮತ್ತು ಭಾನುವಾರದ ಅರತಕ್ಷತೆ ಹಾಗೂ ಜೌತಣ ಕೂಟ ಮತ್ತಷ್ಟು ಅದ್ದೂರಿ ತನದಿಂದ ನೆರವೇರಬೇಕೆಂಬ ಪ್ರಯತ್ನ ನಡೆದಿದೆ. ಈ ಸಂಬಂಧ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಅದ್ದೂರಿ ಸೆಟ್ ಗಳನ್ನು ನಿರ್ಮಿಸಲಾಗಿದೆ. ಈ ವರ್ಣರಂಜಿತ ಅನನ್ಯ ಪ್ರಪಂಚದಲ್ಲಿ ಯುವಜೋಡಿಗಳ ಅರತಕ್ಷತೆ ಸಮಾರಂಭ ಗಮನ ಸೆಳೆಯಿತು.
ವೈಶಿಷ್ಯಪೂರ್ವ ವಿವಾಹ ಸಮಾರಂಭದಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ರಾಯಲ್ ಜೋಡಿಯಾಗಿ ಜನಮನ ಸೆಳೆಯುತ್ತಿದ್ದರು. ಇವರಿಬ್ಬರ ವಸ್ತ್ರವಿನ್ಯಾಸ ಹಾಗೂ ಸಂಪ್ರದಾಯ ಶೈಲಿಗಳು ರಾಯಲ್ ಲುಕ್ ನೀಡಿತ್ತು. ಇಂಡಿಯನ್ ರಾಯಲ್ ಲುಕ್ ಥೀಮ್ ನಲ್ಲಿ ಇವರಿಬ್ಬರು ಮಿಂಚುತ್ತಿದ್ದರು. ಮಸೆಲ್ಲಾ ಮರೂನ್ ಗೊಲ್ಡನ್ ಮರೂನ್ ಕೋಟ್ ಧರಿಸಿದ್ದ ಯಶ್ ಹಾಗೂ ಲೆಹಂಗಾ ಧರಿಸಿದ್ದ ಸಿಂಡ್ರೆಲ್ಲಾ ಸುಂದರಿ ರಾಧಿಕಾ ಪಂಡಿತ್ ತಮ್ಮ ಚಿತ್ರಬದುಕಿನ ಖುಷಿಯೆಲ್ಲವನ್ನೂ ಈ ಮದುವೆಗೆ ಸಮರ್ಪಿಸಿದಂತೆ ಗೋಚರಿಸುತಿದ್ದರು.
ಯಶ್ ವಸ್ತ್ರವಿನ್ಯಾಸದ ಹೊಣೆಯನ್ನು ಮನೀಶ್ ಮಲ್ಹೋತ್ರಾ ವಹಿಸಿದ್ದರೆ, ರಾಧಿಕಾ ವಸ್ತ್ರವಿನ್ಯಾಸ ಸವ್ಯಸಾಚಿ ಅವರದ್ದು. ಈ ಅದ್ದೂರಿ ವಿವಾಹ ಕನ್ನಡ ಚಿತ್ರರಂಗದ ಪಾಲಿಗೆ ಇದೇ ಮೊದಲೇನೋ ಎಂಬಂತೆ ಭಾಸವಾಗುತ್ತಿತ್ತು.
ಕೆಲ ದಿನಗಳ ಹಿಂದೆ ಗಣಿಧನಿ ಜನಾರ್ದನರೆಡ್ಡಿಯ ಪುತ್ರಿಯ ವಿವಾಹ ಅದ್ದೂರಿಯಾಗಿ ನೆರವೇರಿತ್ತು. ದೇಗುಲ ರೂಪದ ಸೆಟ್ ಗಳು ಮದುವೆಗೆ ಆಕರ್ಷಣೆ ತುಂಬಿದ್ದರೆ, ಯಶ್ ರಾಧಿಕಾ ಕಲ್ಯಾಣೋತ್ಸವ ಕೂಡ ಅದಕ್ಕಿಂತ ಕಮ್ಮಿ ಇಲ್ಲ ಎಂಬಂತೆ ಭಾಸವಾಗುತ್ತಿತ್ತು. ರಾಕ್ ಲೈನ್ ವೆಂಕಟೇಶ್, ಜಗ್ಗೇಶ್, ಮಾಲಾಶ್ರೀ, ರವಿಚಂದ್ರನ್ ಹೀಗೆ ಕನ್ನಡ ಚಿತ್ರೋದ್ಯಮದ ನಟನಟಿಯರು ಈ ಮದುವೆ ಸಮಾರಂಭದಲ್ಲಿ ಸಮಾಗಮವಾಗಿದ್ದರು. ದೇವೆಗೌಡ ಸೇರಿದಂತೆ ರಾಜಕೀಯ ಮುಖಂಡರು ಅರತಕ್ಷತೆಗೆ ಆಗಮಿಸಿ ಅಲ್ಲಿನ ಸೊಬಗು ಸೊಗಸನ್ನು ಸಾಕ್ಷೀಕರಿಸಿದರು. ಅಷ್ಟೇ ಅಲ್ಲ ಅಲ್ಲಿನ ಕ್ಯಾಂಡಲ್ ಲೈಡ್ ಡಿನ್ನರ್ ನಲ್ಲಿ ಬಗೆ ಬಗೆಯ ಭಕ್ಷ ಭೋಜನಗಳ ಸವಿಯುಂಡರು.


Courtesy: Balkani News

Facebook Auto Publish Powered By : XYZScripts.com