ಗಲಾಟೆ ಮಾಡಿದ್ರೆ ಥಿಯೇಟ್ರಿಗೆ ಕಾಲಿಡಲ್ಲ ಅಂತ ಶಿವಣ್ಣ ಅಂದಿದ್ಯಾಕೆ?.. ಇಲ್ಲಿ ಓದಿ

ನಗರದ ಲಿಮೆರಿಡಿಯನ್ ಹೋಟೆಲ್ ನಲ್ಲಿ ದಿ ವಿಲನ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ದಯವಿಟ್ಟು ಸಿನಿಮಾ ಸಿನಿಮಾ ರೀತಿಯೇನೋಡಿ, ಇದು ಸಿನಿಮಾ, ಯಾರನ್ನೂ ವೈಯಕ್ತಿವಾಗಿ ತೆಗೆದುಕೊಳ್ಳಬೇಡಿ. ಸಿನಿಮಾದಲ್ಲಿ ರಸದೌತಣ ಇದೆ. ಅದನ್ನು ಎಂಜಾಯ್ ಮಾಡಿ. ಅದನ್ನು ಬಿಟ್ಟು ಗಲಾಟೆ ಶುರು ಮಾಡಿದ್ರೆ ನಮ್ಮ ತಾಯಾಣೆ ಥಿಯೇಟರ್ ಕರೆ ಬರೋದಿಲ್ಲ ಎಂದರು.

ಇನ್ನು ಟೀಸರ್ ಗೆ ಕೆಲವೊಬ್ಬರಿಂದ ನೆಗೆಟಿವ್ ಕಮೆಂಟ್ ಬಂದಿರುವುದಕ್ಕೆ ನಿರ್ದೇಶಕ ಪ್ರೇಮ್ ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದು, ನನಗೆ ಟಾಂಗ್, ಟಿಕ್ ಟಾಕ್ ಮಾಡೋಕೆ ಬರುವುದಿಲ್ಲ. ನಾನೊಬ್ಬ ಮೇಕರ್ ಅಷ್ಟೇ. ಸ್ಯಾಂಡಲ್ ವುಡ್ನಲ್ಲಿ ಯಾರಿಗೂ ನಾನು ಟಾಂಗ್ ನೀಡಲ್ಲ. ಆದರೆ ನಾನು ಟಾಂಗ್ ನೀಡೋದು ಪರಭಾಷಾ ಚಿತ್ರಗಳಿಗೆ ಮಾತ್ರ. ಚಿತ್ರಮಂದಿರದಲ್ಲಿ ಕಟೌಟ್ ಹಾಕೋ ವಿಚಾರಕ್ಕೆ ದಯವಿಟ್ಟು ಯಾರೂ ಗಲಾಟೆ ಮಾಡಿಕೊಳ್ಳಬೇಡಿ ಎಂದು ಪ್ರೇಮ್ ಕೂಡ ಅಭಿಮಾನಿಗಳಲ್ಲಿ ಕೈ ಮುಗಿದು ಕೇಳಿಕೊಂಡಿದ್ದಾರೆ. .

Facebook Auto Publish Powered By : XYZScripts.com