‘ಗಂಡ ಊರಿಗೆ ಹೋದಾಗ’ ಏನ್ ಮಾಡ್ತಾರೆ ಈ ಐವರು ಬೆಡಗಿಯರು..!

ಸಿನಿಮಾ ಡೆಸ್ಕ್ : ಚಂದನವನದಲ್ಲಿ ‘ಗಂಡ ಊರಿಗೆ ಹೋದಾಗ’ ಎಂಬ ಶೀರ್ಷಿಕೆಯ ಸಿನಿಮಾವೊಂದು ಸೆಟ್ಟೇರಿ ಬಹಳ ಸುದ್ದಿ ಮಾಡ್ತಿದೆ.ಈ ಚಿತ್ರವನ್ನು ಮೊದಲ ಬಾರಿಗೆ ಸಾಯಿ ಕೃಷ್ಣ ಎಂಬುವರು ನಿರ್ದೇಶನ ಮಾಡುತ್ತಿದ್ದು, ಸಿಂಧೂರಾವ್, ರಾಧಿಕಾರಾಮ್, ಅನು, ಶಾಲಿನಿ, ಸ್ವಪ್ನ ಐವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇನ್ನೂ ಈ ಸಿನಿಮಾದ ಟ್ರೇಲರ್ ನ್ನು 14 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಅಂದಹಾಗೆ ಈ ಸಿನಿಮಾದಲಲ್ಲಿ ಐವರು ನಾಯಕಿಯರಿದ್ದು, ಸಿನಿಮಾದಲ್ಲಿ ಗಂಡ ಊರಿಗೆ ಹೋದಾಗ ಏನೇನು ಮೋಜು ಮಸ್ತಿ ಮಾಡ್ತಾರೆ ಎಂಬುದು ಸಿನಿಮಾದ ಕಥೆಯಾಗಿದೆ.

ಬಿ.ಕೆ.ಶ್ರೀನಿವಾಸ್ ಈ ಸಿನಿಮಾಗೆ ಹಣ ಹೂಡಿದ್ದು, ಜಗದೀಶ್.ಪಿ.ವಡೆಯರ ಹಳ್ಳಿ, ಜಾರ್ಜ್ ಮತ್ತು ಕಿರಣ್‍ರಾಜ್ ನಿರ್ಮಾಣ ಮಾಡಿದ್ದಾರೆ. ಅರುಣ್ ಆಯಂಡ್ರೂ ಮೂರು ಹಾಡುಗಳಿಗೆ ಸಂಗೀತ ಒದಗಿಸಿದ್ದು, ರಮೇಶ್ ಅವರ ಛಾಯಾಗ್ರಾಹಣ ಈ ಚಿತ್ರಕ್ಕಿದೆ.

Facebook Auto Publish Powered By : XYZScripts.com