ಕ್ರೇಜಿ ಸ್ಟಾರ್ ಗೆ ಕ್ರೇಜಿ ಹುಡ್ಗಿಯಾಗಿ ಪ್ರಿಯಾಮಣಿ ಸಾಥ್!

ಎಂ ಎಸ್ ರಮೇಶ್ ನಿರ್ದೇಶಿಸುತ್ತಿರುವ ‘ದಶರಥ’ ಸಿನೆಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು ನಿಮಗೆ ಈಗಾಗಲೇ ಗೊತ್ತಾಗಿದೆ. ಈ ಸಿನಿಮಾಕ್ಕೆ ಒಬ್ಬಾಕೆ ಸೋನಿಯಾ ಅಗರ್ ವಾಲ್ ನಾಯಕಿಯಾಗಿ ಆಯ್ಯೆಯಾಗಿದ್ದು, ಇದೀಗ ಮತ್ತೋರ್ವ ನಾಯಕಿಯಾಗಿ ಪ್ರಿಯಾಮಣಿ ಆಯ್ಕೆಯಾಗಿದ್ದಾರೆ.
ಈ ಸಿನಿಮಾದಲ್ಲಿ ಮೂವರು ನಾಯಕಿಯರು ಕ್ರೇಜಿ ನಾಯಕನ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಮೂವರಲ್ಲಿ ಸೋನಿಯಾ ಅಗರ್ ವಾಲ್ ಕೂಡ ನಾಯಕಿಯಾಗಿ ರವಿಚಂದ್ರನ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. ಹಾಗೂ ಮತ್ತೋರ್ವ ನಾಯಕಿಯ ಹುಡುಕಾಟ ನಡೆದಿದೆ.

ಸುಮಾರು ೧೫ ವರ್ಷಗಳ ನಂತರ ನಟಿ ಸೋನಿಯಾ ಅಗರ್ವಾಲ್ ಕನ್ನಡ ಚಿತ್ರರಂಗಕ್ಕೆ ಹಿಂದಿರುಗಿದ್ದಾರೆ.

ಅವರ ಕೊನೆಯ ಮತ್ತು ಒಂದೇ ಕನ್ನಡ ಚಿತ್ರ ‘ಚಂದು’ ೨೦೦೨ರಲ್ಲಿ ಬಿಡುಗಡೆಯಾಗಿತ್ತು. ಈ ಸಿನೆಮಾದ ಚಿತ್ರೀಕರಣ ಏಪ್ರಿಲ್ ೧೫ ರಂದು ಪ್ರಾರಂಭವಾಗಿದ್ದು, ಸದ್ಯಕ್ಕೆ ಮೊದಲ ಹಂತದ ಚಿತ್ರೀಕರಣ ಭರದಿಂದ ಸಾಗಿದೆ.

‘ದಶರಥ’ ಇದು ರಾಮಾಯಣದ ಆಧುನಿಕ ಕಥೆಯಾಗಿದ್ದು, ದಶರಥನ ಜೀವನ ಮತ್ತು ಋಷ್ಯಶೃಂಗನನ್ನು ಮದುವೆಯೆಯಾದ ಶಾಂತಳ ಮತ್ತೊಂದು ಬದಿಯನ್ನು ಈ ಆಧುನಿಕ ಕಥೆಯ ಮೂಲಕ ಅನ್ವೇಷಿಸಲಿದ್ದಾರಂತೆ ನಿರ್ದೇಶಕ ರಮೇಶ್.

Courtesy: Kannada news now

Facebook Auto Publish Powered By : XYZScripts.com