’ಕೋಟಿಗೊಬ್ಬ 2’ ಚಿತ್ರದ ದಾಖಲೆ ಮುರಿದ ’ಜಾಗ್ವಾರ್’

2016 ಕನ್ನಡ ಚಿತ್ರ ರಂಗಕ್ಕೆ ಒಳ್ಳೆಯ ವರುಷ ಅಂತಲೇ ಹೇಳಬಹುದು. ವರ್ಷದ ಮೊದಲ ದಿನನೇ ಬಂದ 2 ಚಿತ್ರಗಳು ಹಿಟ್ ಆಗಿದ್ದವು. ಅಲ್ಲಿಂದ ಹಿಂತಿರುಗಿ ನೋಡದ ಕನ್ನಡ ಚಿತ್ರರಂಗ ’ಕೋಟಿಗೊಬ್ಬ 2’ ಚಿತ್ರದ ಮೂಲಕ ತಮಿಳಿನ ಹೆಸರಾಂತ ನಿರ್ದೇಶಕ ಕೆ ಎಸ್ ರವಿಕುಮಾರ್ ಬಂದು ಆ ಚಿತ್ರವನ್ನು ಕನ್ನಡ, ತಮಿಳಿನಲ್ಲಿ 600 ಚಿತ್ರಮಂದಿರ ದಲ್ಲಿ ಬಿಡುಗಡೆ ಮಾಡುವ ಮೂಲಕ ಇನ್ನೊಂದು ದಾಖಲೆ ಮಾಡಿದ್ದರು.
ಈಗ ಬಹು ನಿರೀಕ್ಷಿತ ’ಜಾಗ್ವಾರ್’ ಚಿತ್ರವೂ ಸುದೀಪ್‌ರವರ ’ಕೋಟಿಗೊಬ್ಬ 2’ ಚಿತ್ರದ ದಾಖಲೆ ಮುರಿಯಲಿದೆ. ಜಾಗ್ವಾರ್ ಚಿತ್ರವೂ ತೆಲುಗು ಮತ್ತು ಕನ್ನಡದಲ್ಲಿ 1000 ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆಯಂತೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮೊದಲ ಬಾರಿಗೆ ಅಭಿನಯಿಸಿರುವ ಭಾರಿ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರುವ ‘ಜಾಗ್ವಾರ್’ ದಸರಾ ಹಬ್ಬದ ಕೊಡುಗೆಯಾಗಿ ತೆರೆಕಾಣುತ್ತಿದೆ. ಇದೀಗ ಬಿಡುಗಡೆಯಲ್ಲೂ ವಿಶೇಷತೆ ಮೆರೆಯುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ.
Source: Balkani News

Leave a Reply

Your email address will not be published.

Facebook Auto Publish Powered By : XYZScripts.com