ಕೈ ಹಿಡಿದು ಬೆಳಸಿದ್ದಕ್ಕೆ‌ ಬೆನ್ನಿಗೆ ಚೂರಿ ಇಟ್ಟ ಸ್ನೇಹಿತರು.. ಮನನೊಂದ ಸುದೀಪ್ ಈ ರೀತಿ ಹೇಳಿದ್ದು ಯಾರ ಬಗ್ಗೆ?

ಸುದೀಪ್‌ ಚಿತ್ರರಂಗಕ್ಕೆ ಕಾಲಿಟ್ಟು 22 ವರ್ಷ ಕಳೆದಿದೆ. ಈ ಸಂದರ್ಭದಲ್ಲಿ ತನ್ನ ಮನಸ್ಸಿನ ಮಾತುಗಳನ್ನು ಹಂಚಿಕೊಂಡರು. ಕಿಚ್ಚ ಸ್ನೇಹ ಜೀವಿ, ಸ್ನೇಹಕ್ಕೆ ಹೆಚ್ಚು ಪ್ರಮುಖ್ಯಾತೆ ಕೊಡ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಸ್ನೇಹಿತರಿಂದ ಸಾಕಷ್ಟು‌ ಮನನೊಂದಿದ್ದಾರೆ. ಈ ಬಗ್ಗೆ ಅವರೊಂದಿಗೆ ‌ಮಾತಾನಾಡಿದಾಗ ಕಿಚ್ಚ ಹೇಳಿದ್ದು ಹೀಗೆ..

ನನ್ನ ಜೊತೆ ಇರೋ ಸ್ನೇಹಿತರಿಗೆ ಬಹಳ ಖುಷಿ ಪಡಿಸುತ್ತಿದೆ, ಎಲ್ಲ ಅವರೇ ಎಂದು ತಿಳಿದಿದ್ದೆ.‌ ಆದರೆ ಸ್ನೇಹಿತರ ಹತ್ತಿರ ಎಷ್ಟೇ ಚೆನ್ನಾಗಿದರೂ ಅದರಲ್ಲಿ ಏನಾದರೂ ಒಂದು ತಪ್ಪು ಹುಡುಕುತ್ತಾರೆ. ಇದರಿಂದ ಮನಸ್ಸಿಗೆ ಬಹಳ ನೋವಾಗಿದೆ ಎಂದು ಖಾಸಗಿ ವಾಹಿನಿ‌ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಎಲ್ಲೋ ಇರ್ತಾರೆ ಸ್ನೇಹಿತರು ಎಂದು ಕೈ ಹಿಡಿದುಕೊಂಡು ಬಂದರೆ ನನ್ನ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಯಾರೋ ಏನೋ‌ ಹೇಳಿದ್ರೂ ಎಂದು ಎಲ್ಲೋ ನಿಂತು ಏನೋ ಮಾತನಾಡುವುದು ಸರಿಯಲ್ಲ. ನನ್ನ ಜೊತೆಗೆ ಇದ್ದು, ಇವರು ಯಾವಾಗ ನನ್ನಗೆ ಯಜಮಾನಾದರೂ ಅನ್ನೋ ಯೋಚನೆ ಶುರುವಾಗುತ್ತೆ.

ಇವೆಲ್ಲಾ ಜೀವನಲ್ಲಿ ಒಂದು ಪಾಠ, ಆದರೆ ಎಂದು ಬೇಸರ ಮಾಡಿಕೊಳ್ಳುವುದಿಲ್ಲ. ಯಾಕೆಂದರೆ ಪ್ರತಿಯೊಂದು ಸಂಬಂಧದಲ್ಲಿ ಒಂದು ಸ್ಪಷ್ಟನೆ ಸಿಗಬೇಕು.‌ ಅವರ ದೃಷ್ಟಿಯಲ್ಲಿ ನಾನು ತಪ್ಪು ಮಾಡಿದೆ ಎನಿಸಿ ಇರಬಹುದು, ನನ್ನ ದೃಷ್ಟಿಯಲ್ಲಿ ಅವರು‌ ತಪ್ಪು ಮಾಡಿದ್ದಾರೆ ಎನಿಸಿ ಇರಬಹುದು. ಆದರೆ ಈ ವ್ಯಕ್ತಿ ನಮ್ಮ ಜೀವನದಲ್ಲಿ ಬೇಕೋ ಬೇಡವೊ ಎಂದು ನಿರ್ಧರಿಸಬೇಕು, ಬೇಕು ಎಂದರೆ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ, ಬೇಡ ಎಂದಲ್ಲಿ ಬಿಟ್ಟು ಮುಂದೆ ಹೋಗುವುದೇ ಉತ್ತಮ. ಇಲ್ಲಿ ಯಾರು ಶಾಶ್ವತವಲ್ಲ ಎಂದು ತಮ್ಮ ಮನಸ್ಸಿನ ‌ಮಾತು ಹಂಚಿಕೊಂಡರು.

Facebook Auto Publish Powered By : XYZScripts.com