ಕೇಳುಗರ ಮನ ಗೆದ್ದ ‘3 ಗಂಟೆ 30 ದಿನ 30 ಸೆಕೆಂಡ್’ ಹಾಡುಗಳು

ಒಂದು ಸಿನಿಮಾದ ಗೆಲುವಿನಲ್ಲಿ ಹಾಡುಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಎಷ್ಟೊ ಸಿನಿಮಾಗಳು ಒಳ್ಳೆಯ ಹಾಡುಗಳಿಂದ ಗೆದ್ದು ಬಿಟ್ಟಿದೆ. ಸದ್ಯ ಕನ್ನಡದಲ್ಲಿ ಬಂದಿರುವ ಹಾಡುಗಳ ಪೈಕಿ ‘3 ಗಂಟೆ 30 ದಿನ 30 ಸೆಕೆಂಡ್’ ಹಾಡುಗಳು ಎಲ್ಲರ ಮನ ಗೆದ್ದಿದೆ.

‘3 ಗಂಟೆ 30 ದಿನ 30 ಸೆಕೆಂಡ್’ ಸಿನಿಮಾ ಇದೇ ತಿಂಗಳು 19 ಕ್ಕೆ ರಾಜ್ಯಾದಂತ್ಯ ರಿಲೀಸ್ ಆಗುತ್ತದೆ. ಅದಕ್ಕೂ ಮುಂಚೆ ಚಿತ್ರದ ಹಾಡುಗಳು ಪ್ರೇಕ್ಷಕರಿಗೆ ಹತ್ತಿರವಾಗಿ ಬಿಟ್ಟಿದೆ. ಸಿನಿಮಾಗೆ ವಿ.ಶ್ರೀಧರ್ ಸಂಭ್ರಮ್ ಸಂಗೀತ ನೀಡಿದ್ದು, ಎಲ್ಲ ಹಾಡುಗಳು ಕೇಳುಗರಿಗೆ ಹೊಸ ಫೀಲ್ ನೀಡುತ್ತಿದೆ.

ಸಿನಿಮಾದಲ್ಲಿ ಒಟ್ಟು 6 ಹಾಡುಗಳಿವೆ. ಎರಡು ಹಾಡನ್ನು ಜಯಂತ್ ಕಾಯ್ಕಿಣಿ ಮತ್ತು ಮೂರು ಹಾಡನ್ನು ಮಧುಸೂದನ್ ಬರೆದಿದ್ದಾರೆ. ಜೊತೆಗೆ ವಿಜಯ್ ಪ್ರಕಾಶ್, ಚಂದನ್ ಶೆಟ್ಟಿ, ಟಿಪ್ಪು ಮತ್ತು ವಿ.ಶ್ರೀಧರ್ ಸಂಭ್ರಮ್ ಹಾಡುನ್ನು ಹಾಡಿದ್ದಾರೆ. ಎಲ್ಲ್ ಹಾಡುಗಳು ಸಹ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಚಿತ್ರದ ನಾಯಕ ನಾಯಕಿ ಆಗಿ ಅರು ಗೌಡ ಮತ್ತು ಕಾವ್ಯ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

‘3 ಗಂಟೆ 30 ದಿನ 30 ಸೆಕೆಂಡ್’ ಚಿತ್ರವನ್ನು ಪದ್ಮಶಾಲಿ ನಿರ್ಮಾಣ ಮಾಡಿದ್ದಾರೆ. ಮಧುಸೂದನ್ ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀನಿವಾಸ್ ರಾಮಯ್ಯ ಈ ಸಿನಿಮಾಕ್ಕೆ ಕ್ಯಾಮೆರಾ ಹಿಡಿದಿದ್ದು, ಸಿನಿಮಾ ಜನವರಿ 19ಕ್ಕೆ ರಿಲೀಸ್ ಆಗಲಿದೆ.

source: filmibeat.com

Facebook Auto Publish Powered By : XYZScripts.com