ಕೆಸಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ ಗೋಲ್ಡನ್ ಸ್ಟಾರ್ಟ್ ಗಣೇಶ್ ತಂಡ

ಬೆಂಗಳೂರು: ಶ್ರೀಲಂಕಾ ಕ್ರಿಕೆಟಿಗ ತಿಲಕರತ್ನೆ ದಿಲ್ಶನ್ ಅವರ ಆಲ್ ರೌಂಡರ್ ಆಟದ ನೆರವಿನಿಂದ ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ ಚಾರ್ಜರ್ಸ್ ತಂಡ ಕರ್ನಾಟಕ ಚಲನಚಿತ್ರ ಕಪ್ 2018 ಅನ್ನು ಮುಡಿಗೇರಿಸಿಕೊಂಡಿದೆ.

ಫೈನಲ್ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ ರಾಷ್ಟ್ರಕೂಟ ಪ್ಯಾಂಥರ್ಸ್ ವಿರುದ್ಧ ಗೋಲ್ಡನ್ ಸ್ಟಾರ್ ಗಣೇಶ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಕೆಸಿಸಿ ಕಪ್ ತನ್ನದಾಗಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಯಶ್ ತಂಡ ಗಣೇಶ್ ತಂಡದ ಗೆಲುವಿಗೆ 123 ರನ್ ಟಾರ್ಗೆಟ್ ನೀಡಿತ್ತು. ಸ್ಟಾರ್ ಆಟಗಾರ ಒವೇಶ್ ಷಾ ಅವರ ಭರ್ಜರಿ ಬ್ಯಾಟಿಂಗ್, ಎದುರಾಳಿಗೆ ಸವಾಲಿನ ಮೊತ್ತ ನೀಡುವಲ್ಲಿ ನೆರವಾಯಿತು. ಗುರಿ ಬೆನ್ನಟ್ಟಿದ ಗಣೇಶ್ ತಂಡ 10 ಓವರ್ ಗೆ 4 ವಿಕೆಟ್ ಕಳೆದು 127 ರನ್ ಪೇರಿಸಿದರು.

Facebook Auto Publish Powered By : XYZScripts.com