ಕೆಜಿಎಫ್ ಬಗ್ಗೆ ಪುನೀತ್ ಹೇಳಿದ್ದೇನು?.. ಇಲ್ಲಿ ಓದಿ

ಇಡೀ ಚಿತ್ರರಂಗ ಈಗ ‘ಕೆ ಜಿ ಎಫ್’.. ‘ಕೆ ಜಿ ಎಫ್’.. ‘ಕೆ ಜಿ ಎಫ್’.. ಎಂದು ಜಪ ಮಾಡುತ್ತಿದೆ. ಈ ಸಿನಿಮಾದ ಟ್ರೇಲರ್ ದೊಡ್ಡ ಮೋಡಿ ಮಾಡಿದೆ. ಕನ್ನಡ ಚಿತ್ರರಂಗದ ದಿಗ್ಗಜರು ಸೇರಿದಂತೆ ಪರ ಭಾಷೆಯ ಚಿತ್ರರಂಗದವರು ಚಿತ್ರದ ಟ್ರೇಲರ್ ಬಗ್ಗೆ ಮಾತನಾಡುತ್ತಿದ್ದಾರೆ.

ಈಗ ನಟ ಪುನೀತ್ ರಾಜ್ ಕುಮಾರ್ ‘ಕೆ ಜಿ ಎಫ್’ ಟ್ರೇಲರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚಿತ್ರದ ಟ್ರೇಲರ್ 20 ಮಿಲಿಯನ್ ಹಿಟ್ಸ್ ಪಡೆದಿದ್ದು, ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂದೂರು ಸೇರಿದಂತೆ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿತ್ರದ ಬಿಡುಗಡೆಗೆ ಒಳ್ಳೆಯದಾಗಲಿ ಎಂದಿದ್ದಾರೆ.

‘ಕೆ ಜಿ ಎಫ್’ ಚಿತ್ರ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಸದ್ಯಕ್ಕೆ ಚಿತ್ರದ ಟ್ರೇಲರ್ ಎಲ್ಲ ಭಾಷೆಗಳಲ್ಲಿ ರಿಲೀಸ್ ಆಗಿದೆ. ಎಲ್ಲ ಭಾಷೆಗಳಲ್ಲಿಯೂ ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲಿಯೂ ‘ಕೆ ಜಿ ಎಫ್’ ತೆಲುಗು ಟ್ರೇಲರ್ ಕಳೆದ ನಾಲ್ಕು ದಿನಗಳಿಂದ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ 1 ನಲ್ಲಿ ಇದೆ.

ಅಂದಹಾಗೆ, ಈ ಸಿನಿಮಾ ಡಿಸೆಂಬರ್ 21ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಅದೇ ದಿನ ಶಾರೂಖ್ ಖಾನ್ ಅವರ ‘ಜೀರೋ’ ಸಿನಿಮಾ ಸಹ ರಿಲೀಸ್ ಆಗುತ್ತಿದ್ದು, ಎರಡು ಚಿತ್ರಗಳಿಗೆ ಸ್ಪರ್ಧೆ ಏರ್ಪಟಿದೆ.

Facebook Auto Publish Powered By : XYZScripts.com