ಕೆಜಿಎಫ್ ನಲ್ಲಿ ಯಶ್ ರೆಟ್ರೋ ಲುಕ್ ವೈರಲ್

ಸಿನಿಮಾಡೆಸ್ಕ್ : ಕೆಜಿಎಫ್ ಸಿನಿಮಾದಲ್ಲಿರುವ ಯಶ್ ಲುಕ್ ಕೊನೆಗೂ ಬಯಲಾಗಿದೆ. ರೆಟ್ರೋ ಸ್ಟೈಲ್ ನಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ.

ಕೆಜಿಎಫ್ 80 ರ ದಶಕದ ಕತೆ ಹೇಳಲಾಗುತ್ತಿದ್ದು, ಕಥಾ ನಾಯಕ ಯಶ್ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಸುದ್ದಿ ಹಬ್ಬಿತ್ತು. ಆದರೆ, ಅವರ ಸ್ಟೈಲ್ ಯಾವ ರೀತಿ ಇರಲಿದೆ ಎಂಬ ಕುತೂಹಲವಂತೂ ಇತ್ತು. ಅದಕ್ಕೀಗ ತೆರೆ ಬಿದ್ದಿದೆ. ಯಶ್ ಗೆಟಪ್ ಯಾರಿಗೂ ಗೊತ್ತಗಾಬಾರದೆಂದು ಈವರೆಗೂ ಚಿತ್ರತಂಡ ಕೆಜಿಎಫ್ ನಲ್ಲಿ ಸೆಟ್ ಹಾಕಿ ಗೌಪ್ಯವಾಗಿ ಶೂಟಿಂಗ್ ನಡೆಸುತ್ತಿತ್ತು.

ಅಂದಹಾಗೆ ಇದು ಕನ್ನಡದ ಭಾರೀ ಬಜೆಟ್ ನ ಚಿತ್ರ. ಉಗ್ರಂ ಖ್ಯಾತೀಯ ನಿರ್ದೇಶಕ ನೀಲ್ ಕೆಜಿಎಫ್ ಗೆ ಆಯಕ್ಷನ್ ಕಟ್ ಹೇಳುತ್ತಿದ್ದು, ಶ್ರೀನಿಧಿ ಶೆಟ್ಟಿ ನಾಯಕಿ, ಇದೇ ಮೊದಲ ಬಾರಿಗೆ ಯಶ್ 80 ರ ದಶಕದ ಕತೆಯನ್ನು ಒಪ್ಪಿಕೊಂಡಿದ್ದು, ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳುತ್ತಿದ್ದಾರೆ.

Facebook Auto Publish Powered By : XYZScripts.com