ಕೆಜಿಎಫ್ ಚಿತ್ರದ ಜಬರ್ದಸ್ತ್ ಪೋಸ್ಟರ್!

ಬೆಂಗಳೂರು: ಮದುವೆಯಾದ ನಂತರ ರಾಕಿಂಗ್ ಸ್ಟಾರ್ ಯಶ್ ಮಾಡುತ್ತಿರುವ ಹೊಸ ಚಿತ್ರ ಕೆಜಿಎಫ್. ಇದರಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆಗೆ ನಿನ್ನೆ ಉತ್ತರ ದೊರಕಿದೆ.
 
ಬುಧವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಉದ್ದ ದಾಡಿ ಮತ್ತು ಕೂದಲು ಬಿಟ್ಟುಕೊಂಡು ರಾಕಿಂಗ್ ಸ್ಟಾರ್ ಫುಲ್ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದು ಉಗ್ರಂ ಎಂಬ ಯಶಸ್ವಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶಕರು. ಇದು ಅವರ ಎರಡನೆಯ ನಿರ್ದೇಶನದ ಚಿತ್ರ. ರಾಜಕುಮಾರ ಚಿತ್ರದ ನಿರ್ಮಾಪಕ ವಿಜಯ್ ಕುಮಾರ್ ನಿರ್ಮಾಪಕರು.

Facebook Auto Publish Powered By : XYZScripts.com