‘ಕೆಜಿಎಫ್’ ಚಿತ್ರದ ಈ ಡೈಲಾಗ್ ನಿಮಗೆ ಗೊತ್ತಾ?..

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ತೆರೆಗೆ ಬರಲು ಭರದ ಸಿದ್ದತೆ ನಡೆಸುತ್ತಿದೆ.

ಕೆಜಿಎಫ್’ ಚಿತ್ರದ ಎರಡು ಡೈಲಾಗ್ ವೈರಲ್ ಆಗಿತ್ತು. ಈಗ ಮೂರನೇ ಡೈಲಾಗ್ ಬಹಿರಂಗವಾಗಿದೆ. ಹೌದು, ಟಿವಿ ಸಂದರ್ಶನವೊಂದರಲ್ಲಿ ಯಶ್ ‘ಕೆಜಿಎಫ್’ ಚಿತ್ರದ ಎಕ್ಸ್ ಕ್ಲೂಸಿವ್ ಡೈಲಾಗ್ ಹೇಳಿದ್ದಾರೆ. ‘ಇಫ್ ಯೂ ಆರ್ ಬ್ಯಾಡ್, ಐ ಯಾಮ್ ಯು ಆರ್ ಬ್ಯಾಡ್’ ಎಂಬ ಖಡಕ್ ಡೈಲಾಗ್ ಯಶ್ ರಿವೀಲ್ ಮಾಡಿದ್ದಾರೆ.

ಯೆಸ್, ಸಿನಿರಸಿಕರು ಎದುರು ನೋಡುತ್ತಿರುವ ಬಹು ನಿರೀಕ್ಷಿತ ಕೆಜಿಎಫ್ ಸಿನಿಮಾ ನವೆಂಬರ್ 16 ರಂದು ಬಿಡುಗಡೆಯಾಗುತ್ತಿದೆ. ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿರುವ ಕೆಜಿಎಫ್ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗುತ್ತಿದೆ.

Facebook Auto Publish Powered By : XYZScripts.com