ಕೆಜಿಎಫ್ ಚಿತ್ರದಲ್ಲಿ ಯಶ್ಗೆ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಗೊತ್ತಾ!..ಇಲ್ಲಿ ಓದಿ

ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಸಹ ಒಂದಾಗಿದ್ದು ಚಿತ್ರದ ಹಲವು ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ.

ಕೆಜಿಎಫ್ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾದಾಗ ಚಿತ್ರದಲ್ಲಿ ಯಶ್ ಲುಕ್, ಕಾಸ್ಟ್ಯೂಮ್ ಹೇಗಿರಲಿದೆ ಎಂಬುದು ಬಹಿರಂಗಗೊಂಡಿತ್ತು. ಜತೆಗೆ ಪೋಸ್ಟರ್ ನಲ್ಲಿ ಯಶ್ ಬೈಕ್ ಮೇಲೆ ಕುಳಿತಿದ್ದು ಇದು ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಸೃಷ್ಟಿ ಮಾಡಿತ್ತು. ಅಂತೆಯೇ ಆ ಬೈಕ್ ವಿನ್ಯಾಸದ ಹಿಂದೆಯೂ ಒಂದು ಕಥೆಯಿದೆ.

ಇದೀಗ ಆ ಬೈಕ್ ವಿನ್ಯಾಸಗೊಳಿಸಿದ್ದು ಯಾರು ಎಂಬುದು ಮಾಹಿತಿ ಗೊತ್ತಾಗಿದೆ. ಕೆಜಿಎಫ್ ಚಿತ್ರದ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿರುವ ಭುವನ್ ಗೌಡ. ಈ ರಾಯಲ್ ಎನ್ ಫಿಲ್ಡ್ ಟ್ರಯಂಫ್ ಬೈಕನ್ನು ಚಿತ್ರಕ್ಕಾಗಿ ಡಿಸೈನ್ ಮಾಡಿದ್ದಾರೆ. ಕಾಂಟಿನೆಂಟಲ್ ಜಿಟಿ ಮಾದರಿಯ ಬೈಕ್ ಗೆ ಹೊಸ ಬಗೆಯ ಟಚ್ ನೀಡಿ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.

ಇನ್ನು ಬೈಕ್ ವಿನ್ಯಾಸ ಮಾಡಿರುವ ಭುವನ್ ಗೌಡ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ಬೈಕ್ ಡಿಸೈನ್ ಮಾಡಿರುವ ಶೈಲಿ ಬಗ್ಗೆ ಸಾಕಷ್ಟು ಮೆಚ್ಚುಗೆ ಕೇಳಿಬಂದಿದೆ.

Facebook Auto Publish Powered By : XYZScripts.com