‘ಕೆಜಿಎಫ್’ ಗೆ ಟಕ್ಕರ್ ಕೊಡಲು ಮುಂದಾಗಿದೆ ‘ಫೈಲ್ವಾನ್’ ತಂಡ, ಅವರು ಮಾಡುತ್ತಿರುವುದೇನು ಗೊತ್ತಾ?.. ಇಲ್ಲಿ ಓದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾ ಸದ್ಯ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದಕ್ಕೆ ಪ್ರಮುಖ ಕಾರಣ, ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದು. ಅದಕ್ಕೆ ತಕ್ಕಂತೆ ಟ್ರೈಲರ್ ಕಟ್ ಮಾಡಿರುವುದು ಭಾರತೀಯ ಸಿನಿಇಂಡಸ್ಟ್ರಿಯ ಕಣ್ಣುಕುಕ್ಕುವಂತೆ ಮಾಡಿದೆ.

ಸತತವಾಗಿ ಮೂರು ದಿನಗಳ ಕಾಲ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿತ್ತು ಕೆಜಿಎಫ್ ಟ್ರೈಲರ್. ವೀಕ್ಷಣೆಯಲ್ಲಿ 20 ಮಿಲಿಯನ್ ದಾಟಿರುವುದು ಮತ್ತೊಂದು ದಾಖಲೆ. ಇನ್ನು ಪರಭಾಷೆ ತಾರೆಯರಂತೂ ಕೆಜಿಎಫ್ ಚಿತ್ರದ ಬಗ್ಗೆ ಪ್ರಶಂಸೆಗಳ ಸುರಿಮಳೆ ಗೈದಿದ್ದಾರೆ.

ಇನ್ನು ಪ್ರೀ ರಿಲೀಸ್-ಕಲೆಕ್ಷನ್ ನಲ್ಲಿ ಕೆಜಿಎಫ್ ದೊಡ್ಡ ಬಿಸಿನೆಸ್ ಮಾಡಿದೆ ಎಂಬ ಲೆಕ್ಕಾಚಾರ ಹಾಕಲಾಗ್ತಿದೆ. ಸಿನಿಮಾ ಬಿಡುಗಡೆಯ ನಂತರವಂತೂ ನೂರು ಕೋಟಿ ಕ್ಲಬ್ ಸೇರೋದು ಪಕ್ಕಾ ಎನ್ನಲಾಗ್ತಿದೆ. ಹೀಗೆ, ಕೆಜಿಎಫ್ ಎಂಬ ಕನ್ನಡ ಸಿನಿಮಾ ರಾಷ್ಟ್ರಮಟ್ಟದಲ್ಲಿ ಇಷ್ಟೇಲ್ಲಾ ಸಂಚಲನ ಸೃಷ್ಟಿ ಮಾಡಿದೆ. ಇದೀಗ, ಕೆಜಿಎಫ್ ಚಿತ್ರವನ್ನ ಮೀರಿಸಲು ಮತ್ತೊಂದು ಮೆಗಾ ಸಿನಿಮಾ ಸಿದ್ಧವಾಗ್ತಿದೆ. ಇಷ್ಟು ದಿನ ಸೈಲೆಂಟ್ ಆಗಿದ್ದ ‘ಪೈಲ್ವಾನ್’ ಈಗ ರಣತಂತ್ರವನ್ನ ರೂಪಿಸಿದ್ದಾರೆ.

ಅಷ್ಟಕ್ಕೂ, ಕೆಜಿಎಫ್ ಮೀರಿಸಲು ಪೈಲ್ವಾನ್ ಮಾಡಲಿರುವುದೇನು.? ಮುಂದೆ ಓದಿ….

ಐದು ಭಾಷೆಯಲ್ಲಿ ‘ಕೆಜಿಎಫ್’ ಸಿನಿಮಾ ಬಿಡುಗಡೆಯಾಗಲಿದ್ದು, ಇಷ್ಟೊಂದು ಸದ್ದು ಮಾಡುತ್ತಿದೆ. ಇದೀಗ, ಸುದೀಪ್ ಪೈಲ್ವಾನ್ ಸಿನಿಮಾ ಏಂಟು ಭಾಷೆಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಉದ್ಭವವಾಗಿದೆ. ಇಷ್ಟು ದಿನ ಯಶ್ ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡಿದ್ದರು. ಇದೇ ಮೊದಲ ಭಾರಿಗೆ ಪರಭಾಷೆಗೆ ಎಂಟ್ರಿ ಕೊಡ್ತಿದ್ದಾರೆ. ಅವರ ಚಿತ್ರಕ್ಕೆ ಇಷ್ಟು ಹವಾ ಸೃಷ್ಟಿಯಾಗಿರಬೇಕಾದರೇ, ಬಹುಭಾಷೆಯಲ್ಲೂ ಸ್ಟಾರ್ ಎನಿಸಿಕೊಂಡಿರುವ ಸುದೀಪ್ ಸಿನಿಮಾ ಏಂಟು ಭಾಷೆಯಲ್ಲಿ ಬಂದ್ರೆ ಮತ್ತೆಷ್ಟು ಘರ್ಜಿಸಬಹುದು ಎಂಬ ಮಾತು ಈಗ ಆರಂಭವಾಗಿದೆ.

Facebook Auto Publish Powered By : XYZScripts.com