ಕೆಂಪೇಗೌಡ 2ರಲ್ಲಿ ನಾಯಕನಾಗಿ ಅಭಿನಯಿಸುತ್ತಿರುವುದು ಯಾರು ಗೊತ್ತಾ?

ಕೆಂಪೇಗೌಡ 2 ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಈ ಚಿತ್ರದಲ್ಲಿ ನಟ ಸುದೀಪ್ ಬದಲು ಕೋಮಲ್ ಅವರು ಅಭಿನಯಿಸುತ್ತಾರೆ ಎಂಬ ಗುಲ್ಲು ಎದ್ದಿತ್ತು. ಈಗ ಈ ಅಂತೆ ಕಂತೆಗಳಿಗೆಲ್ಲ ಫುಲ್ ಸ್ಪಾಪ್ ಬಿದಿದ್ದು, ಕೆಂಪೇಗೌಡ-2′ ಚಿತ್ರೀಕರಣ ಪ್ರಾರಂಭವಾಗಿ, ಚಿತ್ರದ ಟ್ರೈಲರ್ ಕೂಡ ರಿಲೀಸ್ ಆಗಿದೆ.

‘ಕೆಂಪೇಗೌಡ-2’ ಚಿತ್ರದಿಂದ ಕಿಚ್ಚ ಸುದೀಪ್ ಹೊರಗುಳಿದಿದ್ದಾರೆ. ಸುದೀಪ್ ಬದಲು ನಟ ಕೋಮಲ್ ಪೊಲೀಸ್ ವೇಷ ಧರಿಸಿದ್ದಾರೆ. ಸಿನಿ ಪ್ರೇಮಿಗಳಿಗೆ ಸರ್ಪ್ರೈಸ್ ಆಗುವಂತೆ, ಕೋಮಲ್ ಕೆಂಪೇಗೌಡನಾಗಿ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ.

ಈ ಮೂಲಕ ಕೋಮಲ್ ಬೆಳ್ಳಿತೆರೆ ಮೇಲೆ ಕೆಂಪೇಗೌಡನಾಗಿ ಅಬ್ಬರಿಸಲಿದ್ದಾರೆ. ‘ಡೀಲ್ ರಾಜ’ ಚಿತ್ರದ ನಂತರ ಕೋಮಲ್ ಕಣ್ಮರೆಯಾಗಿದ್ದರು.

ಈಗ ‘ಕೆಂಪೇಗೌಡ-2’ ಚಿತ್ರದ ಟ್ರೇಲರ್ ನಲ್ಲಿ ಅವರನ್ನು ನೋಡಿದವರಿಗೆಲ್ಲಾ ಶಾಕ್. ಈ ಚಿತ್ರಕ್ಕಾಗಿ ಕೋಮಲ್ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ‘ಡೀಲ್ ರಾಜ’ ಚಿತ್ರದಲ್ಲಿ ದುಂಡುಗೆ ಇದ್ದ ಕೋಮಲ್ ಈಗ ತಮ್ಮ ದೇಹವನ್ನ ದಂಡಿಸಿ ಫಿಟ್ ಅಂಡ್ ಫೈನ್ ಆಗಿ ಪೊಲೀಸ್ ಕ್ಯಾಪ್ ತೊಟ್ಟಿದ್ದಾರೆ

ತಮಿಳಿನ ಬ್ಲಾಕ್ ಬಸ್ಟರ್ ಸಿನಿಮಾ ‘ಸಿಂಗಂ-2’ ಚಿತ್ರದ ರೀಮೇಕ್ ‘ಕೆಂಪೇಗೌಡ-2′ ಎನ್ನಲಾಗುತ್ತಿದೆ. “ಕೆಂಪೇಗೌಡ’ ಚಿತ್ರ ನಿರ್ಮಿಸಿದ ಶಂಕರೇಗೌಡ ಅವರೇ “ಕೆಂಪೇಗೌಡ-2′ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಉಳಿದಂತೆ ಚಿತ್ರದ ಇತರೆ ಕಲಾವಿದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

Courtesy: Kannada News Now

Facebook Auto Publish Powered By : XYZScripts.com