‘ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ ಧುರ್ಯೋಧನ ಆಗಿದ್ರೆ ಸುದೀಪ್ ಕರ್ಣ ಆಗಿರಬೇಕು: ಮುನಿರತ್ನ

ದರ್ಶನ್ ಅವರ 50 ಸಿನಿಮಾ ‘ಕುರುಕ್ಷೇತ್ರ’ ವನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾ ಖ್ಯಾತಿಯ ನಿರ್ದೇಶಕ ನಾಗಣ್ಣ ನಿರ್ದೇಶಿಸುತ್ತಿರುವುದು ನಿಮಗೆ ಗೊತ್ತಿರುವ ವಿಷಯ.

ದರ್ಶನ್ ಧುರ್ಯೋಧನನ ಪಾತ್ರ ಮಾಡುತ್ತಿರುವುದರಿಂದ ಸುದೀಪ್ ಕರ್ಣನ ಪಾತ್ರ ಮಾಡಬೇಕಂತೆ. ಹೌದು ಹೀಗಂತ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ. ಕುರುಕ್ಷೇತ್ರ ಸಿನಿಮಾದಲ್ಲಿ ಸುದೀಪ್ ಕರ್ಣನಾಗಬೇಕು ಎಂಬುವುದು ನನ್ನಾಸೆ ಎಂದಿದ್ದಾರೆ ಮುನಿರತ್ನ.

ಬರೋಬ್ಬರಿ ನಲವತ್ತು ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದ್ದು, ಚಿತ್ರಕ್ಕೆ ಮುನಿರತ್ನ ಬಂಡವಾಳ ಹೂಡುತ್ತಿದ್ದಾರೆ. ಜುಲೈ ತಿಂಗಳಿಂದ ಶೂಟಿಂಗ್ ಪ್ರಾರಂಭವಾಗಲಿದೆ.

Facebook Auto Publish Powered By : XYZScripts.com