‘ಕುರುಕ್ಷೇತ್ರ’ದ ಬಗ್ಗೆ ಟ್ವೀಟ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಯಾವಾಗ, ಆ ಸಿನಿಮಾ ಎಲ್ಲಿಗೆ ಬಂದಿದೆ, ಏನ್ ನಡಿತಿದೆ ಎಂಬ ಹತ್ತು ಹಲವು ಪ್ರಶ್ನೆಗಳು ಅಭಿಮಾನಿಗಳನ್ನ ಕಾಡುತ್ತಿದೆ. ಆದ್ರೆ, ಈ ಬಗ್ಗೆ ಯಾರೊಬ್ಬರು ಸುಳಿವು ಕೂಡ ಕೊಟ್ಟಿರಲಿಲ್ಲ. ಇದೀಗ, ಸ್ವತಃ ದರ್ಶನ್ ಅವರೇ ಈ ಚಿತ್ರದ ಅಪ್ ಡೇಟ್ ನೀಡಿದ್ದಾರೆ. ‘ಕುರುಕ್ಷೇತ್ರ’ ಸಿನಿಮಾ ಯಾವ ಹಂತದಲ್ಲಿ ಇದೆ ಎಂಬುದರ ಬಗ್ಗೆ ಟ್ವೀಟ್ಟರ್ ಮೂಲಕ ಉತ್ತರಿಸಿದ್ದಾರೆ. ”ಕುರುಕ್ಷೇತ್ರ ಚಿತ್ರದ ನನ್ನ ಡಬ್ಬಿಂಗ್ ಭಾಗ ಇಂದು ಸಂಪೂರ್ಣವಾಗಿ ಮುಗಿದಿದೆ. ಇನ್ನೇನು ಚಿತ್ರದ ಮುಂದಿನ ಚಟುವಟಿಕೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ” ಎಂದು ದಾಸ ಟ್ವೀಟ್ ಮಾಡಿ ಬಹಿರಂಗಪಡಿಸಿದ್ದಾರೆ.

Facebook Auto Publish Powered By : XYZScripts.com