ಕುಚುಕು ಗೆಳೆಯ ಸೃಜನ್ ತಾಯಿಯ ಹುಟ್ಟುಹಬ್ಬ ಮಾಡಿದ ದರ್ಶನ್

ನಟ ದರ್ಶನ್ ಮತ್ತು ಸೃಜನ್ ಇಬ್ಬರು ಕನ್ನಡ ಚಿತ್ರರಂಗದ ಕುಚುಕು ಗೆಳೆಯರು. ಖಳನಾಯಕರ ಮಕ್ಕಳಾಗಿ ನಾಯಕನ ಪಟ್ಟಕ್ಕೆ ಏರಿ ಇಂದು ಸ್ಯಾಂಡಲ್ ವುಡ್ ಸ್ಟಾರ್ ಗಳಾಗಿ ಈ ಇಬ್ಬರು ನಟರು ಮಿಂಚುತ್ತಿದ್ದಾರೆ. ಗಜ ಮತ್ತು ಸೃಜ ಇಬ್ಬರ ಸ್ನೇಹ ಎಷ್ಟು ನಿರ್ಮಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ನಿನ್ನೆ ಹಿರಿಯ ನಟಿ ಹಾಗೂ ಸೃಜನ್ ಲೋಕೇಶ್ ತಾಯಿ ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬ ಇತ್ತು. ಈ ವೇಳೆ ದರ್ಶನ್ ತಾವೇ ಖುದ್ದಾಗಿ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ದರ್ಶನ್ ಮತ್ತು ಸೃಜನ್ ಜೊತೆಗೆ ಅವರ ಆಪ್ತ ಸ್ನೇಹಿತರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಗಿರಿಜಾ ಲೋಕೇಶ್ ಅವರ ಹುಟ್ಟುಹಬ್ಬವನ್ನು ದರ್ಶನ್ ಆಚರಣೆ ಮಾಡಿರುವ ಫೋಟೋವನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತೂಗುದೀಪ ಮತ್ತು ಲೋಕೇಶ್ ಕುಟುಂಬದ ಅನುಬಂಧ ಹೀಗೆ ಇರಲಿ ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ.

‘ಕುರುಕ್ಷೇತ್ರ’ ಸಿನಿಮಾದಲ್ಲಿ ಬಿಜಿ ಇದ್ದರು ದರ್ಶನ್ ಸ್ನೇಹಿತನ ತಾಯಿಯ ಹುಟ್ಟುಹಬ್ಬ ಮಾಡಿದ್ದಾರೆ. ಅಂದಹಾಗೆ, ದರ್ಶನ್ ಮತ್ತು ಸೃಜನ್ ಅನೇಕ ಸಿನಿಮಾಗಳನ್ನು ಸಹ ಒಟ್ಟಿಗೆ ಮಾಡಿದ್ದಾರೆ. ‘ಜಗ್ಗುದಾದ’, ‘ಚಕ್ರವರ್ತಿ’ ಸಿನಿಮಾಗಳು ಇತ್ತೀಚಿಗಿನ ಇವರಿಬ್ಬರ ಕಾಂಬಿನೇಶನ್ ನಲ್ಲಿ ಬಂದ ಸಿನಿಮಾಗಳಾಗಿವೆ.

Facebook Auto Publish Powered By : XYZScripts.com