ಕಿರಿಕ್ ಹುಡುಗಿ ಸಂಯುಕ್ತ ಕಿಸ್ ಕೊಟ್ಟಿದ್ದು ಯಾರಿಗೆ??

ಎಂಟಿವಿ ವಾಹಿನಿಯ ಜನಪ್ರಿಯ ‘ರೋಡೀಸ್ ರೈಸಿಂಗ್’ ರಿಯಾಲಿಟಿ ಶೋಗೆ ನಟಿ ಸಂಯುಕ್ತ ಹೆಗಡೆ ಸೆಲೆಕ್ಟ್ ಆಗಿದ್ದಾರೆ ಎಂಬ ವರದಿಯನ್ನ ಇದೇ ಸಿಂಪ್ಲಿ ಸಿನೆಮಾ ದಲ್ಲಿ ಓದಿದ್ದೀರಿ. ಮಾರ್ಚ್ ತಿಂಗಳಿನಲ್ಲಿ ‘ರೋಡೀಸ್ ರೈಸಿಂಗ್’ ಜರ್ನಿ ಮುಗಿದಿದ್ದು, ಅದರ ಕಂತುಗಳು ಇದೀಗ ಎಂಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಅದೇ ಶೋನಲ್ಲಿ ನಟಿ ಸಂಯುಕ್ತ ಹೆಗೆಡೆ ಲವ್ ಸ್ಟೋರಿ ಶುರು ಆಗಿದೆ.

ಎಂಟಿವಿ ವಾಹಿನಿಯ ‘ರೋಡೀಸ್ ರೈಸಿಂಗ್’ ರಿಯಾಲಿಟಿ ಶೋನಲ್ಲಿ ನಟಿ ಸಂಯುಕ್ತ, ರನ್ ವಿಜಯ್ ಗ್ಯಾಂಗ್ ನಲ್ಲಿದ್ರೆ, ಬಸೀರ್ ಎಂಬ ಹೈದರಾಬಾದ್ ಮೂಲದ ಯುವಕ ಪ್ರಿನ್ಸ್ ನರುಲಾ ಗ್ಯಾಂಗ್ ನಲ್ಲಿದ್ದಾರೆ. ಗ್ಯಾಂಗ್ ಬೇರೆ ಬೇರೆ ಆಗಿದ್ದರೂ, ‘ರೋಡೀಸ್ ರೈಸಿಂಗ್’ ಜರ್ನಿಯಲ್ಲಿ ಸಂಯುಕ್ತ ಮತ್ತು ಬಸೀರ್ ನಡುವೆ ಸಂಥಿಂಗ್ ಸಂಥಿಂಗ್ ಶುರುವಾಗಿದೆ.

ರೋಡೀಸ್ ರೈಸಿಂಗ್’ ಜರ್ನಿಯಲ್ಲಿ ಬಸೀರ್ ಗೆ ನಟಿ ಸಂಯುಕ್ತ ಹೆಗಡೆ ಕಿಸ್ ಕೊಟ್ಟಿದ್ದಾರೆ. ಬಸೀರ್ ಕೆನ್ನೆ ಮೇಲೆ ಸಂಯುಕ್ತ ರವರ ತಿಳಿ ಕೆಂಪು ತುಟಿಗಳು ಅಚ್ಚಾಗಿದೆ. ಬಸೀರ್ ಕೆನ್ನೆಗೆ ತುಟಿ ಒತ್ತಿರುವುದು ಮಾತ್ರ ಅಲ್ಲ. ಇಬ್ಬರೂ ಮ್ಯಾಚಿಂಗ್-ಮ್ಯಾಚಿಂಗ್ ಎನ್ನುವಂತೆ ಪಿಂಕ್ ಟಿ-ಶರ್ಟ್ ತೊಟ್ಟಿದ್ದು ‘ರೋಡೀಸ್ ರೈಸಿಂಗ್’ ಜರ್ನಿಯಲ್ಲಿ ಎಲ್ಲರನ್ನ ಆಶ್ಚರ್ಯಚಕಿತಗೊಳಿಸಿತು.

Facebook Auto Publish Powered By : XYZScripts.com