ಕಿಟ್ಟಿಗೆ ಬ್ರೇಕ್ ನೀಡುತ್ತಾ ಸಿಲಿಕಾನ್ ಸಿಟಿ?

ಎಂಥವರನ್ನೂ ಒಂದರೆಕ್ಷಣ ತಿರುಗಿ ನೋಡುವಂತೆ ಮಾಡುವ ರಗಡ್ ಧ್ವನಿ, ಲುಕ್ಕು, ಆಕ್ಟಿಂಗ್. ಹೀಗೆ ಎಲ್ಲಾ ಇದ್ದೂ ಒಂದು ಭರಪೂರ ಗೆಲುವಿಗಾಗಿ ತಹತಹಿಸುತ್ತಾ ಬಂದಿರುವವರು ಶ್ರೀನಗರ ಕಿಟ್ಟಿ. ಈ ಸಲ ಅಂಥಾದ್ದೊಂದು ಗೆಲುವು ಸಾಧ್ಯವಾದೀತಾ ಎಂಬ ಪ್ರಶ್ನೆಗೆ `ಸಿಲಿಕಾನ್ ಸಿಟಿ ಚಿತ್ರ ಎಬ್ಬಿಸಿರೋ ಹವಾ ಸಕಾರಾತ್ಮಕ ಉತ್ತರವಾಗಿ ನಿಲ್ಲುತ್ತದೆ!ದೊಡ್ಡ ಗ್ಯಾಪ್ ನಂತರ ಕಿಟ್ಟಿ ನಾಯಕರಾಗಿರುವ `ಸಿಲಿಕಾನ್ ಸಿಟಿ ಚಿತ್ರ ರಿಲೀಸಾಗುತ್ತಿದೆ. ತಮಿಳಿನ ಮೆಟ್ರೋ ಚಿತ್ರದ ರೀಮೇಕ್ ಆಗಿದ್ದರೂ ಆ ಕಥಾ ಎಳೆಯನ್ನು ಇಲ್ಲಿನ ನೇಟಿವಿಟಿಗೆ ಪಳಗಿಸಿಕೊಂಡಿರುವವರು ನಿರ್ದೇಶಕ ಮುರಳಿ ಗುರಪ್ಪ. ಬಹುಶಃ ಶ್ರೀನಗರ ಕಿಟ್ಟಿ ಅವರ ವೃತ್ತಿ ಜೀವನದಲ್ಲಿ ಈ ಚಿತ್ರದ್ದು ಭಿನ್ನವಾದ ಪಾತ್ರ. ಅದರ ಸುಳಿವು ಈಗಾಗಲೇ ಬಿಡುಗಡೆಗೊಂಡು ಗಮನ ಸೆಳೆದಿರುವ ಟ್ರೈಲರ್ನಲ್ಲಿಯೇ ಸಿಕ್ಕಿ ಹೋಗಿದೆ.

ಅದನ್ನ ಕಂಡ ಸಿನಿಪ್ರೇಮಿಗಳು ಭಾರೀ ನಿರೀಕ್ಷೆಯನ್ನೂ ಮೂಡಿಸಿಕೊಂಡಿದ್ದಾರೆ.

 ಇತ್ತೀಚೆಗಷ್ಟೇ ಕಿಚ್ಚಾ ಸುದೀಪ್ ಬಿಡುಗಡೆ ಮಾಡಿದ್ದ ಸಿಲಿಕಾನ್ ಸಿಟಿ ಹಾಡುಗಳೂ ಕೂಡಾ ಟ್ರೆಂಡ್ ಹುಟ್ಟು ಹಾಕಿರೋದು ಚಿತ್ರತಂಡದ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ. ಅನೂಪ್ ಸಿಳಿನ್ ಅವರ ಸಂಗೀತ ನಿರ್ದೇಶನವೂ ಈ ಮೂಲಕ ಮತ್ತೆ ಮೋಡಿ ಮಾಡಿದೆ. ಮಂಜುಳಾ ಸೋಮಶೇಖರ್, ರಂ ರವಿ ಮತ್ತು ಸಿಆರ್ ಸುರೇಶ್ ಜೊತೆಗೆ ಸ್ವತಃ ಶ್ರೀನಗರ ಕಿಟ್ಟಿ ಕೂಡಾ ಬಂಡವಾಳ ಹೂಡಿರುವ ಈ ಚಿತ್ರ ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡಿದೆ.

ಶ್ರೀನಗರ ಕಿಟ್ಟಿಗೆ ಭರ್ಜರಿ ಬ್ರೇಕ್ ನೀಡುವ ನಿರೀಕ್ಷೆ ಹುಟ್ಟಿಸಿರೋ ಈ ಚಿತ್ರ ಈಗ ತೆರೆಗೆ ಬರುತ್ತಿದೆ.

Courtesy: Cinebuzz

Facebook Auto Publish Powered By : XYZScripts.com