ಕಿಚ್ಚ ಹಿನ್ನಲೆ ಧ್ವನಿ ನೀಡಿದ್ದ ಮಿತ್ರನ ‘ರಾಗ’ ಇಂದು ರಿಲೀಸ್!

ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್ ಹಿನ್ನೆಲೆ ಧ್ವನಿ ನೀಡಿದ್ದ ‘ರಾಗ’ ಸಿನಿಮಾ ಅಭಿಮಾನಿಗಳಲ್ಲಿ ಬಹಳಾನೇ ಕ್ಯುರಿಯಾಸಿಟಿ ಹುಟ್ಟಿಸಿತ್ತು. ಪಿ.ಸಿ ಶೇಖರ್ ನಿರ್ದೇಶನದ ಈ ಸಿನಿಮಾವನ್ನು ಮಿತ್ರಾ ನಿರ್ಮಿಸಿ, ನಟಿಸಿದ್ದಾರೆ. ಸುದೀಪ್ ಈ ಸಿನಿಮಾಕ್ಕೆ ಹಿನ್ನೆಲೆ ಧ್ವನಿ ನೀಡಿದ್ದರು.ಇಂದು ‘ರಾಗ ಸಿನಿಮಾ’ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಸಿನಿಮಾದಲ್ಲಿ ಇಬ್ಬರ ಅಂಧರ ಬದುಕಿನ ಕತೆ ಇದೆ. ಈ ಎರಡು ಪಾತ್ರಗಳನ್ನು ಮಿತ್ರಾ ಹಾಗೂ ಭಾಮಾ ನಿರ್ವಹಿಸಿದ್ದಾರೆ. ಇನ್ನೂ ಅರ್ಜುನ್ ಜನ್ಯ ಮ್ಯೂಸಿಕ್ ಈ ಸಿನಿಮಾಕ್ಕಿದೆ. ತಾರಾಂಗಣದಲ್ಲಿ ರಮೇಶ್ ಭಟ್, ಅವಿನಾಶ್, ಸಿಹಿಕಹಿ ಚಂದ್ರು, ರೂಪಿಕಾ, ಚಂದನ್ ಶರ್ಮಾ, ನಂದಿನಿ ಮತ್ತಿತತರು ಕಾಣಿಸಿಕೊಂಡಿದ್ದಾರೆ.

Courtesy: Kannada News Now

Facebook Auto Publish Powered By : XYZScripts.com