ಕಿಚ್ಚ ಸುದೀಪ್ ಯುವಕರಿಗೆ ಕೊಟ್ಟ ಸಂದೇಶವೇನು?.. ಇಲ್ಲಿ ಓದಿ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನೂ ಕೆಲವೇ ತಿಂಗಳು ಮಾತ್ರ ಬಾಕಿಯಿದೆ. ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನ ಅಂತಿಮಗೊಳಿಸಿ, ಪ್ರಚಾರಕ್ಕಾಗಿ ಸ್ಟಾರ್ ಕಲಾವಿದರನ್ನ ಕರೆತರುವ ಪ್ರಯತ್ನ ಮಾಡುತ್ತಿದೆ.

ಇನ್ನು ಕಿಚ್ಚ ಸುದೀಪ್ ಈ ಬಾರಿ ಚುನಾವಣ ಅಖಾಡಕ್ಕೆ ಧುಮುಕುತ್ತಾರೆ, ರಾಜಕೀಯ ಪಕ್ಷದ ಪರ ಪ್ರಚಾರ ಮಾಡ್ತಾರೆ ಎನ್ನಲಾಗಿದೆ. ಈ ಮಧ್ಯೆ ಸುದೀಪ್ ಅವರು ಮತದಾನದ ಬಗ್ಗೆ ಕ್ಯಾಂಪೈನ್ ಆರಂಭಿಸಿದ್ದಾರೆ.

ಹೌದು, ಮುಂಬರುವ ಚುನಾವಣೆಯಲ್ಲಿ ಯುವಕರು ಹೆಚ್ಚು ಭಾಗವಹಿಸಬೇಕು. ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಸುದೀಪ್ ಒತ್ತಾಯಿಸಿದ್ದಾರೆ. ಈ ಕುರಿತು ಒಂದು ವಿಡಿಯೋ ಕೂಡ ಮಾಡಿದ್ದಾರೆ.

ಒಂದು ಉತ್ತಮ ಸಮಾಜ ಮತ್ತು ಉತ್ತಮ ದೇಶವನ್ನ ಕಟ್ಟಲು ಮತದಾನ ತುಂಬ ಅವಶ್ಯಕ. ಭ್ರಷ್ಟಚಾರಿಗಳು ಕಿತ್ತೆಸೆಯಲು ಮತ್ತು ಒಬ್ಬ ಉತ್ತಮ ನಾಯಕನನ್ನ ಉಳಿಸಿಕೊಳ್ಳಲು ನಿಮ್ಮ ಮತ ಅತ್ಯಾಮೂಲ್ಯ. ಹೀಗಾಗಿ, ಮತದಾನ ಮಾಡಿ, ಮತದಾನ ಮಾಡಲು ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳಿ. 18 ವರ್ಷ ಆಗುತ್ತಿದ್ದಾಗೆ ನೀವು ಮತದಾನ ಮಾಡಲು ಅರ್ಹರು. ಯಾರ ಬಳಿ ವೋಟ್ ಐಡಿ ಕಾರ್ಡ್ ಇಲ್ವೋ, ದಯವಿಟ್ಟು ಎಲ್ಲರೂ ವೋಟ್ ಐಡಿ ಕಾರ್ಡ್ ಮಾಡಿಸಿ” ಎಂದು ಮನವಿ ಮಾಡಿಕೊಂಡಿದ್ದಾರೆ.

”ಸದೃಡ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಮತದಾರನೇ ನಿರ್ಣಾಯಕ, ಈಗಲೇ ಮತದಾರರಾಗಿ ನೊಂದಾಯಿಸಿಕೊಳ್ಳಿ” ಎಂದು ಬಿ-ಪ್ಯಾಕ್ ಎಂಬ ಸಂಸ್ಥೆ ಅಭಿಯಾನ ಆರಂಭಿಸಿದ್ದಾರೆ. ಇವರಿಗೆ ಕಿಚ್ಚ ಸುದೀಪ್ ಸಹಕರಿಸಿದ್ದು, ಯುವಕರಿಗೆ ಸಂದೇಶ ನೀಡಿದ್ದಾರೆ.

Facebook Auto Publish Powered By : XYZScripts.com