ಕಿಚ್ಚ ಸುದೀಪ್ ಗೆ ಲಂಡನ್ನಿಂದ ಬಂದಿದೆ ಸಿಹಿ ಸುದ್ದಿ; ಏನದು?

ಕಿಚ್ಚ ಸುದೀಪ್ ಇನ್ನೂ ಸಹ ‘ಹೆಬ್ಬುಲಿ’ ಚಿತ್ರದ ಯಶಸ್ಸಿನ ಗುಂಗಿನಲ್ಲಿದ್ದಾರೆ. ಅಲ್ಲದೇ ಇತ್ತ ಸಂತೋಷದಿಂದ ಜೋಗಿ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಹೀಗಿರುವಾಗಲೇ ಅಭಿನಯ ಚಕ್ರವರ್ತಿಗೆ ಶುಭ ಸುದ್ದಿಯೊಂದು ಬಂದಿದೆ.[ಇದನ್ನ ಸುದೀಪ್ ರವರಿಂದ ಯಾರೂ ನಿರೀಕ್ಷಿಸಿರಲಿಲ್ಲ.! ಅದು ದರ್ಶನ್ ಕುರಿತಾಗಿ.!]

ಅಂದಹಾಗೆ ‘ರನ್ನ’ ಸುದೀಪ್ ರವರಿಗೆ ಸಿಹಿ ಸುದ್ದಿ ಬಂದಿರುವುದು ಲಂಡನ್ ನಿಂದ. ಆದ್ರೆ ಈ ವಿಷಯ ಸಿನಿಮಾಗೆ ಸಂಬಂಧಪಟ್ಟಿದ್ದಂತು ಅಲ್ಲ. ಹಾಗಿದ್ರೆ ಸುದೀಪ್ ಗೆ ಬಂದಿರುವ ಆ ಹ್ಯಾಪಿ ನ್ಯೂಸ್ ಏನು? ಇಲ್ಲಿದೆ ನೋಡಿ…

ಹೌದು, ಕಿಚ್ಚ ಸುದೀಪ್ ಗೆ ಲಂಡನ್ ನಿಂದ ಬಂದಿರುವ ಹ್ಯಾಪಿ ನ್ಯೂಸ್ ಇದೇ. ಇಂಗ್ಲೆಂಡ್ ನ ರಾಜಧಾನಿ ಲಂಡನ್ ನಲ್ಲಿರುವ ಲಾರ್ಡ್ಸ್ ಮೈದಾನದಲ್ಲಿ ಕ್ರಿಕೆಟ್ ಆಡಲು ಸುದೀಪ್ ಗೆ ಆಹ್ವಾನ ಬಂದಿದೆ.

ಕ್ರಿಕೆಟ್ ಕಾಶಿ/ಮೆಕ್ಕಾ ಎಂದೇ ಪ್ರಖ್ಯಾತವಾದ ಇಂಗ್ಲೆಂಡಿನ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಪ್ರತಿಷ್ಠಿತ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ನಟ ಸುದೀಪ್ ಬ್ಯಾಟ್ ಬೀಸಲಿದ್ದಾರೆ.

ಅಂದಹಾಗೆ ಸುದೀಪ್ ಪಾಲ್ಗೊಳ್ಳಲಿರುವ ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಜರುಗಲಿರುವ ಕ್ರಿಕೆಟ್ ಟೂರ್ನಮೆಂಟ್ ‘ಕಾರ್ಪೋರೇಟ್ ಕ್ರಿಕೆಟ್ ಡೇ 2017’ ಅಂಗವಾಗಿ ಮೇ 11 ರಂದು ನಡೆಯಲಿದೆ.

ಕಿಚ್ಚ ಸುದೀಪ್ ಕ್ರಿಕೆಟ್ ಪ್ರೇಮಿ ಮತ್ತು ಪಾರ್ಟ್ ಟೈಮ್ ಆಟಗಾರರು ಆಗಿದ್ದು, ಸೆಲೆಬ್ರಿಟಿ ಕ್ರಿಕೆಟ್ ಲೀಗ್(ಸಿಸಿಎಲ್) ಟೀಮ್ ಕರ್ನಾಟಕ ಬುಲ್ಡೋಜರ್ಸ್ ಕ್ಯಾಪ್ಟನ್. ಈಗ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆಹ್ವಾನ ಪಡೆದಿರುವ ಸುದೀಪ್ ತಮ್ಮ ಸಂತೋಷವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

Courtesy: Filmibeat

Facebook Auto Publish Powered By : XYZScripts.com