ಕಿಚ್ಚ ಸುದೀಪ್ ಗೆ ದೊರೆತ ಹೊಸ ಬಿರುದೇನು ಗೊತ್ತಾ?.. ಇಲ್ಲಿ ಓದಿ

ಅಭಿನವ ಚಕ್ರವರ್ತಿ, ಕಿಚ್ಚ, ಮಾಣಿಕ್ಯ ಎಂಬ್ಯಾದಿ ಅನೇಕ ಬಿರುದುಗಳಿಂದ ಕರೆಸಿಕೊಳ್ಳುತ್ತಿದ್ದ ಕಿಚ್ಚ ಸುದೀಪ್ ಅವರಿಗ ಪೈಲ್ವಾನ್ ಚಿತ್ರತಂಡ ಮತ್ತೊಂದು ಬಿರುದು ನೀಡಿದ್ದು ಅಭಿಮಾನಿಗಳ ಪ್ರೀತಿ ಪಾತ್ರವಾಗಿದೆ. ಅಲ್ಲದೇ ಈವರೆಗೂ ಬಾಡಿ ಬಿಲ್ಡಿಂಗ್ ಬಗ್ಗೆ ತಲೆಕೆಡಿಸಿಕೊಳ್ಳದ ಕಿಚ್ಚ ಸುದೀಪ್, ಪೈಲ್ವಾನ್’ಗಾಗಿ ದೇಹ ದಂಡಿಸಿ ಹುರಿಗೊಳಿಸಿದ್ದು, ಈಗ ಅದರ ಪೋಸ್ಟರ್ ಬಿಡುಗಡೆಯಾಗಿ ಸಖತ್ ವೈರಲಾಗಿದೆ.

ಯಾವುದೇ ಪಾತ್ರ ನೀಡಿದರೂ ಅದಕ್ಕೆ ನ್ಯಾಯ ಒದಗಿಸುವ ಸುದೀಪ್, ಪೈಲ್ವಾನ್ ಚಿತ್ರಕ್ಕಾಗಿ ಸುಮಾರು ಐದಾರು ತಿಂಗಳು ಬಾಡಿ ಬಿಲ್ಡಪ್ ಮಾಡಿ ದೇಹವನ್ನು ದಂಡಿಸಿ ಥೇಟ್ ಪೈಲ್ವಾನ್ ಆಗಿ ಅಖಾಡಕ್ಕೆ ಸಿದ್ಧರಾಗಿದ್ದಾರೆ. ಅಲ್ಲದೇ ಬಾಲಿವುಡ್‌ನಲ್ಲಿ ಶಾರೂಕ್ ಖಾನ್‌ಗೆ ಮಾತ್ರ ಬಾದಶಾಷ್ ಕರೆಯುತ್ತಾರೆ. ಬಾಡಿ ಬಿಲ್ಡ್ ಮಾಡಿ ಪೈಲ್ವಾನ್ ಆಗಿರುವ ಕಿಚ್ಚ ಸುದೀಪ್ ಗೆ ಸ್ವತಃ ಚಿತ್ರತಂಡವೇ ಬಾದಶಾಷ್ ಎಂದು ಬಿರುದು ನೀಡಿ ಅಭಿಮಾನಿಗಳಿಗೆ ಹೊಸ ಸುದ್ದಿ ನೀಡಿದ್ದಾರೆ.

ಇದುವರೆಗೂ ಸುದೀಪ್ ಮಾಡಿರುವ ಚಿತ್ರಗಳಲ್ಲಿ ವಿಭಿನ್ನ ಚಿತ್ರ ಇದಾಗಲಿದ್ದು, ಸುದೀಪ್ ರ ಹೊಸ ಗೆಟಪ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ. ಪೈಲ್ವಾನ್ ನನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಹೆಬ್ಬುಲಿ ನಿರ್ದೇಶಿಸಿದ್ದ ಕೃಷ್ಣ ಅವರಿಗೆ ಸುದೀಪರೊಂದಿಗಿನ ಎರಡನೇ ಚಿತ್ರವಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಕರುಣಾಕರ್ ಕ್ಯಾಮೆರಾ ಹಿಡಿದಿದ್ದಾರೆ.

Facebook Auto Publish Powered By : XYZScripts.com