ಕಿಚ್ಚ ಸುದೀಪ್ ಅವರ ಸಿಕ್ಸ್ ಪ್ಯಾಕ್ ಬಗ್ಗೆ ನಿರ್ದೇಶಕ ಹೇಳಿರುವ ಮಾತೇನು?.. ಇಲ್ಲಿ ಓದಿ

ಪ್ರೇಮ್ ನಿರ್ದೇಶನದ ದ ವಿಲನ್ ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ನಟ ಸುದೀಪ್ ತಮ್ಮ ಮುಂಬರುವ ಚಿತ್ರ ಪೈಲ್ವಾನಗೆ ಅಣಿಯಾಗುತ್ತಿದ್ದಾರೆ. ಬಾಕ್ಸಿಂಗ್ ಮತ್ತು ರೆಸ್ಲಿಂಗ್ ವಿಷಯ ಕುರಿತಾದ ಕಥೆ ಇರುವ ಚಿತ್ರವನ್ನು ಎಸ್.ಕೃಷ್ಣ ನಿರ್ದೇಶಿಸುತ್ತಿದ್ದಾರೆ.

ಬ್ಯಾಟ್ಮಿಂಟನ್, ಕ್ರಿಕೆಟ್, ಆಬ್ಸ್ ಇತ್ಯಾದಿ ಕ್ರೀಡೆಗೆ ಸಂಬಂಧಿಸಿದ ಆಟಗಳಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿರುವ ನಟ ಸುದೀಪ್ ಇದುವರೆಗೆ ಜಿಮ್ ಗೆ ಹೋಗಿ ದೇಹ ದಂಡಿಸಿದವರಲ್ಲ. ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿ ತರಬೇತುದಾರರಿಂದ ತರಬೇತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

ಕಳೆದ ಕೆಲ ವಾರಗಳಿಂದ ಸುದೀಪ್ ಗೆ ಜೀತ್ ದೇವಯ್ಯ ಎಂಬುವವರು ತರಬೇತಿ ನೀಡುತ್ತಿದ್ದಾರೆ. ಇನ್ನು ಒಂದೆರಡು ಮೂರು ವಾರಗಳಲ್ಲಿ ಅವರು ದೇಹವನ್ನು ಸಿನಿಮಾಕ್ಕೆ ತಕ್ಕಂತೆ ಮಾಡಿಕೊಳ್ಳಲಿದ್ದಾರೆ. ಮಾರ್ಚ್ ಕೊನೆ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಚಿತ್ರದ ಶೂಟಿಂಗ್ ಪ್ರಾರಂಭಿಸುವ ಯೋಜನೆಯಲ್ಲಿದ್ದೇವೆ ಎನ್ನುತ್ತಾರೆ ನಿರ್ದೇಶಕರು.

ಆದರೆ ಪೈಲ್ವಾನ ಕೇವಲ ಸಿಕ್ಸ್ ಪ್ಯಾಕ್ ಗೆ ಮಾತ್ರ ಸಂಬಂಧಪಟ್ಟದ್ದಲ್ಲವಂತೆ. ಬಾಕ್ಸರ್ ಮತ್ತು ರೆಸ್ಲರ್ ಪಾತ್ರಕ್ಕೆ ಹೊಂದಿಕೆಯಾಗಲು ಸುದೀಪ್ ಜಿಮ್ ಗೆ ಹೋಗಿ ತರಬೇತಿ ಪಡೆಯುತ್ತಿದ್ದಾರೆ. ಸುದೀಪ್ ತಮ್ಮ ತರಬೇತುದಾರರ ಜೊತೆ ಇದೇ ವಾರ ಥೈಲ್ಯಾಂಡ್ ಗೆ ಹೋಗಲಿದ್ದಾರಂತೆ. ಅಲ್ಲಿನ ಕುಗ್ರಾಮವೊಂದರಲ್ಲಿ ಬಾಕ್ಸಿಂಗ್ ಮತ್ತು ರೆಸ್ಲಿಂಗ್ ಗೆ ಸಂಬಂಧಪಟ್ಸಾಂಟ ಸಾಂಪ್ರದಾಯಿಕ ತರಬೇತಿ ಪಡೆದು ಬರಲಿದ್ದಾರಂತೆ.

Facebook Auto Publish Powered By : XYZScripts.com