ಕಿಚ್ಚ ಪೈಲ್ವಾನ್ ಆಗಲು ಇವರೇ ಕಾರಣ

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಯಾವಾಗ ಪ್ರಾರಂಭ ಆಗುತ್ತೆ. ಚಿತ್ರದಲ್ಲಿ ಕಿಚ್ಚನ ಲುಕ್ ಹೇಗಿರುತ್ತೆ. ಅನ್ನುವ ಕುತೂಹಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡಿದ ಸಿನಿಮಾ ಟೀಂ ಪ್ರೀ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದಾರೆ.

ಇತ್ತ ಕಿಚ್ಚ ಜಿಮ್ ನಲ್ಲಿ ದೇಹ ದಂಡಿಸುತ್ತಿದ್ದಾರೆ. ಸುದೀಪ್ ಜಿಮ್ ಗೆ ಬರ್ತಿದ್ದಾರಂತೆ ಅನ್ನುವ ಸುದ್ದಿಯೇ ಸಖತ್ ವೈರಲ್ ಆಗಿದೆ. ತನ್ನ ಸಿನಿಮಾ ಜರ್ನಿಯಲ್ಲಿ ಮೊದಲ ಬಾರಿಗೆ ಸುದೀಪ್ ವರ್ಕ್ ಔಟ್ ಸ್ಟಾರ್ಟ್ ಮಾಡಿದ್ದಾರೆ. ಅಷ್ಟಕ್ಕೂ ಕಿಚ್ಚ ಜಿಮ್ ಗೆ ಬರಲು ಕಾರಣ ಯಾರು ಗೊತ್ತಾ? ಅವರ ಪತ್ನಿ ಪ್ರಿಯಾ ಸುದೀಪ್

ಈ ಬಗ್ಗೆ ಕಿಚ್ಚ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಪರ್ಸನಲ್ ಟ್ರೈನರ್ ಪರಿಚಯ ಮಾಡಿಸುವುದರ ಜೊತೆಯಲ್ಲಿ ನನ್ನನ್ನು ಜಿಮ್ ಗೆ ಹೋಗುವಂತೆ ಉತ್ಸಾಹ ತುಂಬಿದ ಪ್ರಿಯಾಗೆ ಥ್ಯಾಂಕ್ಸ್ ಎಂದಿದ್ದಾರೆ.

ಸುದೀಪ್ ಅವರಿಗೆ ಜೀತ್ ದೇವಯ್ಯ ಟ್ರೈನಿಂಗ್ ಮಾಡುತ್ತಿದ್ದಾರೆ. ಅವರ ಜೊತೆಗಿನ ಪೋಟೋ ಹಾಕುವ ಮೂಲಕ ಅಭಿಮಾನಿಗಳಿಗೆ ಟ್ರೈನರ್ ಅನ್ನು ಸುದೀಪ್ ಪರಿಚಯಿಸಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಜೀತ್ ದೇವಯ್ಯ ನಿಧಾನವಾಗಿ ವರ್ಕ್ ಔಟ್ ಪ್ರಾರಂಭ ಮಾಡಿದ್ದೇವೆ. ಖಂಡಿತವಾಗಿಯೂ ಯಶಸ್ಸು ಕಾಣುತ್ತೇವೆ ಎಂದಿದ್ದಾರೆ.

ಸುದೀಪ್ ಅವರ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿರುವ ಪೋಟೋಗಳನ್ನ ನೋಡಿದರೆ ವ್ಯತ್ಯಾಸ ಕಾಣುತ್ತಿದೆ. ಕಿಚ್ಚನ ಮೈಕಟ್ಟು ಬದಲಾಗಿದೆ. ಈ ಬಾರಿ ತೆರೆ ಮೇಲೆ ಪೈಲ್ವಾನ್ ವಿಭಿನ್ನ ರೀತಿಯಲ್ಲಿ ನೋಡುವುದು ಖಚಿತವಾಗುತ್ತಿದೆ.

Facebook Auto Publish Powered By : XYZScripts.com