ಕಿಚ್ಚನ ಅಭಿಮಾನಿಗಳು ಅವರಿಗೆ ಇಂದು ಅಭಿನಂದಿಸಿ.. ಯಾಕೆ ಗೊತ್ತಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇಂದಿಗೆ 22 ವರ್ಷ. ಈ ಮೂಲಕ ಸುದೀಪ್ ಹೊಸ ಮೈಲಿಗಲ್ಲು ತಲುಪಿ ಮುಂದಡಿ ಇಟ್ಟಿದ್ದಾರೆ.

ಅವರ 22 ವರ್ಷಗಳ ಹಿಂದೆ ಅವರ ಸಿನಿ ಜರ್ನಿ ಸುಲಭವಾಗೇನೂ ಇರಲಿಲ್ಲ. ಸುದೀಪ್ 1996 ಜನವರಿ 31 ರಂದು ಮೊದಲಿಗೆ ಬಣ್ಣ ಹಚ್ಚಿದ್ದು, ತಮ್ಮ ಸಿನಿಮಾ ಜರ್ನಿಯಲ್ಲಿ ಜೊತೆಯಾದ, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ಹಿಂದಿ, ತೆಲುಗು, ತಮಿಳು ಚಿತ್ರರಂಗದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಸುದೀಪ್, ಈಗ ಹಾಲಿವುಡ್ ನಲ್ಲಿಯೂ ಮಿಂಚಲು ರೆಡಿಯಾಗಿದ್ದಾರೆ.

ನಟನಾಗಿ ಮಾತ್ರವಲ್ಲದೇ, ನಿರ್ದೇಶಕ, ನಿರ್ಮಾಪಕನಾಗಿ ಕಿಚ್ಚ ಗಮನ ಸೆಳೆದಿದ್ದಾರೆ. ಕಿರುತೆರೆಯಲ್ಲಿ ಅವರು ‘ಬಿಗ್ ಬಾಸ್’ 5 ಸೀಸನ್ ಗಳನ್ನು ಹೋಸ್ಟ್ ಮಾಡಿದ್ದಾರೆ. ತಮ್ಮದೇ ಶೈಲಿಯ ನಿರೂಪಣೆಯಿಂದಾಗಿ ಕಿರುತೆರೆಯಲ್ಲಿಯೂ ವೀಕ್ಷಕರನ್ನು ಸೆಳೆದಿದ್ದಾರೆ.

ಕಿಚ್ಚ ಸಿನಿರಂಗದಲ್ಲಿ 22 ವರ್ಷಗಳನ್ನು ಪೂರೈಸಿರುವ ಈ ಸಂದರ್ಭದಲ್ಲಿ ಅಭಿಮಾನಿಗಳು, ಹಿತೈಷಿಗಳು ಅಭಿನಂದಿಸಿದ್ದಾರೆ.

Facebook Auto Publish Powered By : XYZScripts.com