ಕಿಚ್ಚನಿಗೆ ತುಕಾಲಿ ಅಂದ ಅವಿವೇಕಿಗೆ ಬೆಂಡೆತ್ತಿದ ಫ್ಯಾನ್ಸ್!

ಆನ್ಲೈನ್ನಲ್ಲಿ ಮಹಾ ಪರಾಕ್ರಮಿಗಳಂತೆ ಮೆರೆದಾಡೋ ಕೆಲ ಉತ್ತರ ಕುಮಾರರ ಬಿಟ್ಟಿ ಪೌರುಷದಿಂದಾಗಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ವಿನಾ ಕಾರಣ ಬೆಂಕಿ ಹೊತ್ತಿಕೊಳ್ಳುತ್ತಿದೆ. ಇದೀಗ ತಲೆಮಾಸಿದವನೊಬ್ಬ ಕಿಚ್ಚಾ ಸುದೀಪ್ ಅವರಿಗೆ ‘ತುಕಾಲಿ ಅಂತೆಲ್ಲ ಟ್ವೀಟ್ ಮಾಡಿ ಸಮಸ್ತರಿಂದಲೂ ಮಹಾ ಮಂಗಳಾರತಿ ಮಾಡಿಸಿಕೊಳ್ಳುತ್ತಿದ್ದಾನೆ!ಪ್ರತಾಪ್ ಎಂಬ ಅಡ್ನಾಡಿ ಯುವಕನೊಬ್ಬ ಸುಖಾ ಸುಮ್ಮನೆ ‘ಬಾಸ್ ಅಂದ್ರೆ ಇಬ್ರೆ. ಡಿ ಬಾಸ್ ಮತ್ತೆ ಯಶ್ ಬಾಸ್. ತುಕಾಲಿ ಸುದೀಪ್ ಬಾಸ್ ಆಗಲ್ಲ ಅಂತ ಟ್ವೀಟ್ ಮಾಡಿದ್ದಾನೆ. ಇದಕ್ಕೆ ಸುದೀಪ್ ‘ನೀವು ನನ್ನನ್ನು ದಶಿಸೋ ರೀತಿಯನ್ನು ನಾ ಪ್ರೀತಿಸುತ್ತೇನೆ. ಇದೇ ಮತ್ತಷ್ಟು ಗೆಲುವಿಗೆ ಸ್ಫೂರ್ತಿ ತುಂಬುತ್ತೆ ಎಂಬರ್ಥದಲ್ಲಿ ಉತ್ತರ ನೀಡಿದ್ದಾರೆ.

ಆದರೆ ದರ್ಶನ್ ಯಶ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ತಿಕ್ಕಾಟ ಮಾತ್ರ ಇನ್ನೂ ನಿಂತಿಲ್ಲ. ವಿನಾ ಕಾರಣ ಇವನ್ಯಾರೋ ಆಡಿರೋ ಅವಿವೇಕಿ ಮಾತು ಕೇಳಿ ಕೆಂಡಾಮಂಡಲವಾಗಿರೋ ಸುದೀಪ್ ಅಭಿಮಾನಿಗಳು ‘ಸುದೀಪ್ ಬರೀ ಬಾಸ್ ಅಲ್ಲ ಬಿಗ್ ಬಾಸ್ ಅನ್ನೋ ಮೂಲಕ ಎದಿರೇಟನ್ನೂ ಕೊಡುತ್ತಿದ್ದಾರೆ.
ಈ ಪ್ರತಾಪ್ ಎಂಬ ಅವಿವೇಕಿ ಈವತ್ತು ಆನ್ಲೈನ್ನಲ್ಲಿ ಮೆರೆದಾಡುತ್ತಿರೋ ಐನಾತಿ ಮೆಂಟಾಲಿಟಿಯ ಮಂದಿಯ ಪ್ರತಿನಿಧಿ ಇದ್ದಂತೆ. ಟೈಪ್ ಮಾಡಲು ಬಂದು ಬಿಟ್ಟರೆ ಜಗತ್ತನ್ನೇ ಗೆದ್ದು ಬಿಡುತ್ತೇವೆಂಬ ಭ್ರಮೆ ಇಂಥಾ ಅವಿವೇಕಿಗಳನ್ನು ಆವರಿಸಿಕೊಂಡಿರುತ್ತದೆ. ಯಾರಿಗೆ ಏನು ಬೇಕಾದರೂ ಅಂದು ಬಚಾವಾಗ ಬಹುದೆಂಬ ಭ್ರಮೆ ಇಂಥಾ ಎಳಸು ಆಸಾಮಿಗಳದ್ದು.
ಇಂಥಾದ್ದೇ ಉಡಾಫೆಯಿಂದ ಕಿಚ್ಚನಿಗೆ ತುಕಾಲಿ ಅಂದ ಪ್ರತಾಪ ಈಗ ಬೀಳುತ್ತಿರೋ ಮಾಂಜಾ ತಡಕೊಳ್ಳಲಾರದೆ ಪರಿತಪಿಸುತ್ತಿರಬಹುದೇನೋ.

(ವಿಶೇಷ ಸೂಚನೆ : ನಾವು ನೀಡುವ ವಸ್ತುನಿಷ್ಟ ವರದಿ/ವಿಮರ್ಶೆಗಳನ್ನು ಕಂಡು ಉರಿಬಾಧೆಗೆ ಬಿದ್ದು ಬಾಯಿಗೆ ಬಂದಂತೆ ಅವಾಚ್ಯ ಸಂದೇಶ ಕಳಿಸುವ ಕಿಡಿಗೇಡಿಗಳಿಗೆ ನಾವು ಕಾನೂನಿನ ಮೂಲಕವೇ ಉತ್ತರ ನೀಡುತ್ತೇವೆ. ಇನ್ನುಮುಂದೆ ಯಾರಾದರೂ ಕೊಳಕು ಕಮೆಂಟ್ ಮಾಡುವ ಧೈರ್ಯಶಾಲಿಗಳು ಜೊತೆಗೆ ತಮ್ಮ ವಿಳಾಸ, ಸಂಪರ್ಕ ಸಂಖ್ಯೆಯನ್ನೂ ನಮೂದಿಸಿದ್ದರೆ ಒಳ್ಳೆಯದು.)

Courtesy: cinebuzz
Facebook Auto Publish Powered By : XYZScripts.com