ಕಿಕಿ ಚಾಲೆಂಜ್ ಮೀರಿಸಿ ಧೂಳೆಬ್ಬಿಸುತ್ತಿರುವ ಟುವ್ವಿ ಟುವ್ವಿ ಚಾಲೆಂಜ್

ಸ್ವಲ್ಪ ದಿನಗಳ ಮಟ್ಟಿಗೆ ತಣ್ಣಗಾಗಿದ್ದ ‘ಕೀ-ಕೀ’ ಚಾಲೇಂಜ್ ಮತ್ತೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಕೀ ಕೀ ಹಾಡಿನ ಬದಲಾಗಿ , ನಟಿ ಸಿಂಧೂ , ಆನಂದ್ ಚಿತ್ರದ ‘ಟುವ್ವಿ ಟುವ್ವಿ’ ಹಾಡಿಗೆ ನೃತ್ಯ ಮಾಡಿದ್ದಾರೆ.

ಬೆಂಗಳೂರು, ಆ.23 : ‘ಕೀ ಕೀ’ ಚಾಲೇಂಜ್ ಅಪಾಯವೆಂದರೂ ಸಹ, ಈ ಚಾಲೇಂಜ್ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿತ್ತು. ಆದರೂ ಸಹ ಕೆಲವರು ಮತ್ತೆ ಮತ್ತೆ ಈ ಚಾಲೇಂಜ್ ಅನ್ನು ಸ್ವೀಕರಿಸುತ್ತಾ ಬಂದಿದ್ದಾರೆ. ಇದೀಗ ಈ ‘ಕೀ ಕೀ’ ಚಾಲೇಂಜ್ ಗೆ ಬದಲಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ‘ಆನಂದ್’ ಚಿತ್ರದ ‘ಟುವ್ವಿ ಟುವ್ವಿ’ ಚಾಲೆಂಜನ್ನು ಚಂದನವನದ ಚೆಲುವೆ ಸಿಂಧು ಲೋಕನಾಥ್ ಅವರು ಪ್ರಾರಂಭಿಸಿದ್ದಾರೆ.

‘ಆನಂದ್’ ಚಿತ್ರದ ಹಾಡು

ನಟಿ ಸಿಂಧೂ ಲೋಕನಾಥ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಿದ್ದು, ಅದರಲ್ಲಿ ಅವರು ಚಲಿಸುತ್ತಿರುವ ಸ್ಕೂಟಿಯಿಂದ ಇಳಿದು ಟುವ್ವಿ ಟುವ್ವಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ‘ಇದು ಕಿಕಿ ಚಾಲೆಂಜ್ ಗೆ ಬದಲಾಗಿ ಕನ್ನಡ ‘ಟುವ್ವಿ ಟುವ್ವಿ ಚಾಲೆಂಜ್. ಇದನ್ನು ನಮ್ಮ ಕನ್ನಡಿಗರೆಲ್ಲರು ಸ್ವೀಕರಿಸಿ, ಹಾಗೇ ಶಿವಣ್ಣನ ಅಭಿಮಾನಿಗಳು ಕೂಡ ಈ ಚಾಲೆಂಜ್ ಸ್ವೀಕರಿಸಿ’ ಎಂದು ಸಿಂಧು ಹೇಳಿದ್ದಾರೆ. ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Facebook Auto Publish Powered By : XYZScripts.com