ಕಾಶಿನಾಥ್ ನನ್ನ ದೇವರು, ಅವರ ಮನೆಯೇ ದೇವಸ್ಥಾನ: ಉಪೇಂದ್ರ

ಬೆಂಗಳೂರು: ‘ಕಾಶಿನಾಥ್ ಅವರು ನನ್ನ ಪಾಲಿನ ದೇವರು, ಅವರ ಮನೆ ದೇವಸ್ಥಾನ’ ಎಂದು ನಟ, ಕೆಪಿಜೆಪಿ ಸ್ಥಾಪಕ ಉಪೇಂದ್ರ ಕಂಬನಿ ಸುರಿಸಿದ್ದಾ ರೆ. ಕಾಶಿನಾಥ್ ಅವರ ಪಾರ್ಥಿವ ಶರೀರ ಜಯನಗರದ ಮನೆಗೆ ತಂದ ವೇಳೆ ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದರು. ‘ನಾನು ಚಿತ್ರರಂಗದ ಎಬಿಸಿಡಿ ಕಲಿತದ್ದು ಕಾಶಿನಾಥ್ ಅವರಲ್ಲಿ. ಅವರ ಮನೆ ಯಲ್ಲಿ ನನಗೆ ಊಟ ಹಾಕಿದ್ದಾರೆ. ಅವರೊಬ್ಬ ಮಹಾನ್ ವ್ಯಕ್ತಿ. ಅವರ ನಿಧನ ದಿಂದ ತುಂಬಾ ಆಘಾತವಾಗಿದೆ.

 

ಅದು 80ರ ದಶಕದ ಕನ್ನಡ ಚಿತ್ರರಂಗ. ವಿಷ್ಣುವರ್ಧನ್, ಅಂಬರೀಶ್, ರಾಜ್ ಕುಮಾರ್, ಶಂಕರ್ ನಾಗ್ ಅಂತಹ ಕಲಾವಿದರು ಅಬ್ಬರಿಸುತ್ತಿದ್ದ ಸಮಯ. ಕಾದಂಬರಿ ಆಧಾರಿತ ಹಾಗೂ ಕಮರ್ಷಿಯಲ್ ಸಿನಿಮಾಗಳ ಕಾಲ. ಅಲ್ಲಿಯವರೆಗೂ ಮಡಿವಂತಿಕೆ, ಸಂಪ್ರದಾಯ, ಶಿಸ್ತು ಎಂಬ ಮೌಲ್ಯಗಳನ್ನಿಟ್ಟು ಸಿನಿಮಾ ಮಾಡುತ್ತಿದ್ದರು ಅಂದಿನ ನಿರ್ದೇಶಕರು.

ಇಂತಹ ಸಂಪ್ರದಾಯ, ಸಂಸ್ಕ್ರತಿಯನ್ನ ಪಕ್ಕಕ್ಕಿಟ್ಟು ಕನ್ನಡ ಚಿತ್ರರಂಗದಲ್ಲಿ ಹೊಸ ಪದ್ದತಿ, ಹೊರ ಪರಂಪರೆ ಹುಟ್ಟುಹಾಕಿದ ನಟ, ನಿರ್ದೇಶಕ ಕಾಶಿನಾಥ್. ಹೀರೋ ಆಗಲು ಶಾರೀರ ಮತ್ತು ಶರೀರ ಮುಖ್ಯವೆಂಬ ಆಚಾರವನ್ನ ಮುರಿದ ಕಲಾವಿದ. ತಮ್ಮದೇ ಸಿನಿಮಾಗಳ ಮೂಲಕ ಹೊಸ ಅಲೆ ಸೃಷ್ಟಿಸಿದ ಕಲಾ ಚತುರ.

Facebook Auto Publish Powered By : XYZScripts.com