ಕಾಳಿ ಸ್ವಾಮಿಗಳು ಪವರ್ ಸ್ಟಾರ್ ವಿರುದ್ಧ ತಿರುಗಿ ಬಿದ್ದಿರುವುದೇಕೆ ?… ಇಲ್ಲಿ ಓದಿ

ಕಳೆದ ಕೆಲದಿನಗಳಿಂದ ಯಾವುದೇ ವಾಹಿನಿ ನೋಡಿದ್ರೂ ಒಂದೇ ಜಾಹೀರಾತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪೋತಿಸ್. ದಿನಕ್ಕೆ ನಲವತ್ತರಿಂದ ಐವತ್ತು ಬಾರಿ ಪ್ರಸಾರವಾಗುತ್ತಿದೆ.

”ನಾಡ ಪ್ರಭು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ನಾಲ್ಕೂ ದಿಕ್ಕಿಗೆ ಗಡಿ- ಗೋಪುರಗಳನ್ನು ಕಟ್ಟಿದರು. ಎಲ್ಲ ಕಡೆ ಕೆರೆ- ಕಟ್ಟೆಗಳನ್ನು ಕಟ್ಟಿಸಿದರು. ಆದರೆ ಒಂದೇ ಒಂದು ಕೊರತೆ ಎಂದರೆ ಅವರ ಪತ್ನಿಗೆ ಒಳ್ಳೆಯ ಸೀರೆ ಸಿಗುವ ಒಂದು ಮಳಿಗೆಯನ್ನು ಮಾತ್ರ ಕಟ್ಟಿಸಲಾಗಲಿಲ್ಲ. ಕೊನೆಗೆ ತಮಿಳು ನಾಡು ಮೂಲದ ಪೋತಿಸ್ ನವರು ಒಂದು ಮಳಿಗೆಯನ್ನು ಕಟ್ಟಿಸಿದರು. ಆಗ ಕೆಂಪೇಗೌಡರ ಪತ್ನಿ ಹಾಗೂ ಅವರ ಆಸ್ಥಾನದವರು ಸಂತೋಷಗೊಂಡರು” ಇದು ಜಾಹೀರಾತಿನ ಸಾರಂಶ.

ಈ ಜಾಹೀರಾತಿನ ವಿರುದ್ಧ ಈಗ ಕಾಳಿ ಮಠದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಕೋಪಗೊಂಡಿರುವ ಸ್ವಾಮೀಜಿ ಪೋತಿಸ್ ಸಂಸ್ಥೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅಷ್ಟಕ್ಕೂ ಆ ಜಾಹೀರಾತಿನಲ್ಲಿ ಏನಿದೆ? ಕೋರ್ಟ್ ಮೆಟ್ಟಿಲೇರಿದ್ದೇಕೆ? ಈ ಪ್ರಶ್ನೆಗಳಿಗೆ ಖುದ್ದು ಋಷಿಕುಮಾರ ಶ್ರೀಗಳು ಉತ್ತರಿಸಿದ್ದಾರೆ.

ಆ ಜಾಹೀರಾತಿನಲ್ಲಿ ಕೇವಲ ಯಾರೋ ಒಬ್ಬ ರಾಜನ ಆಸ್ಥಾನವನ್ನು ತೋರಿಸಬಹುದಾಗಿತ್ತು. ಆದರೆ ಕೆಂಪೇಗೌಡರ ಹೆಸರು ಬಳಸಿಕೊಳ್ಳುವ ಮೂಲಕ ಬೆಂಗಳೂರಿನೊಂದಿಗೆ ನಮ್ಮದು ಐತಿಹಾಸಿಕ ಸಂಬಂಧ ಎನ್ನುವುದನ್ನು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಪೋತಿಸ್ ನವರು ಮಾಡಿದ್ದಾರೆ ಎಂಬುದು ಸ್ವಾಮೀಜಿ ವಾದ. ಈ ಜಾಹೀರಾತಿಗೆ ಕನ್ನಡಿಗರ ವಿರೋಧ ಎದುರಾಗದಂತೆ ಪುನೀತ್ ರಾಜಕುಮಾರ್ ಅವರನ್ನು ಗುರಾಣಿಯಾಗಿ ಬಳಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ ಅವರಿಗೆ ಇಂತಹದ್ದೊಂದು ಸೂಕ್ಷ್ಮ ಅರ್ಥವಾಗದೆ ಹೋದದ್ದು ದುಃಖದ ಸಂಗತಿ ಎನ್ನುತ್ತಾರೆ ಶ್ರೀಗಳು.

 

Facebook Auto Publish Powered By : XYZScripts.com