ಕಾಮಾತುರಾಣಂ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಹೊಸ ಹೊಸ ಕನಸು. ಐಡಿಯಾಗಳೊಂದಿಗೆ ಹೊಸಬರು ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ. ಅಂಥವರಲ್ಲಿ ಈಗ ಹೊಸಬರ ಚಿತ್ರವೊಂದು ವೈರಲ್ ಆಗಿದೆ. ಚಿತ್ರಕ್ಕೆ “ಕಾಮಾತುರಾಣಂ- ನ ಭಯ ಲಜ್ಜ” ಅಂತ ಹೆಸರಿಟ್ಟಿದ್ದಾರೆ. ಮೋಹನ ಕುಮಾರ ಅವರ ನಿರ್ದೇಶನ ಚಿತ್ರಕ್ಕಿದ್ದು, ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದೆ.
ಎಮ್ ಕೆ ಆರ್ ಪಿಕ್ಚರ್ಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಜೈ ರಾಜ್ ಸಂಗೀತ, ಅಶೋಕ ಛಾಯಾಗ್ರಹಣವಿದೆ. ಹಾಗೂ ಚಿತ್ರದಲ್ಲಿ ರೀತೂ ಜನೋತಿ, ಲಕ್ಕಿ, ಕಿಂಗ್ ಮೋಹನ್, ನಟಿಸಿದ್ದಾರೆ. ಇನ್ನು ನಾಯಕಿ ರೀತೂ ಜನೋತಿ ಬ್ಯಾಕ್ ಸೈಡ್ ನಿಂದ ಫೋಸ್ ಕೊಟ್ಟಿದ್ದು, ಬೆನ್ನ ಮೇಲೆ ಹ್ಯಾಂಗ್ ರೇಪಿಸ್ಟ್ ಹಾಗೂ ಎರಡು ಕೈಗಳಿರುವ ಚಿತ್ರ ಬಿಡಿಸಲಾಗಿದೆ.