ಕರ್ನಾಟಕದಲ್ಲಿ ‘ಬಾಹುಬಲಿ-2’ ರಿಲೀಸ್ ಆಗೋದು ಡೌಟ್

ರಾಜಮೌಳಿ ನಿರ್ದೇಶನದ ‘ಬಾಹುಬಲಿ-2’ ಚಿತ್ರದ ಕುರಿತಂತೆ ಕಳೆದ ಎರಡು ವರ್ಷಗಳಿಂದ ಕುತೂಹಲದಿಂದ ಕಾಯುತ್ತಿದ್ದ ಕರ್ನಾಟಕದ ಪ್ರೇಕ್ಷಕರಿಗೆ ನಿರಾಸೆಯಾಗುವ ಸಾಧ್ಯತೆ ಎದ್ದುಕಾಣುತ್ತಿದೆ. ಇದಕ್ಕೆ ಕಾರಣ ಕಟ್ಟಪ್ಪ ನಡೆ. ಕಟ್ಟಪ್ಪ ಕನ್ನಡಿಗರ ಕ್ಷಮೆಯಾಚಿಸದೇ ಹೋದಲ್ಲಿ ‘ಬಾಹುಬಲಿ-2’ ಕರ್ನಾಟಕದಲ್ಲಿ ರಿಲೀಸ್ ಆಗುವ ಸಾಧ್ಯತೆ ಇಲ್ಲ. ಕಟ್ಟಪ್ಪ ಹೇಳಿಕೆಯಿಂದ ಬೇಸತ್ತಿರುವ ಕನ್ನಡಪರ ಸಂಘಟನೆಗಳು, ಕಟ್ಟಪ್ಪ ಕ್ಷಮೆಯಾಚಿಸುವವರೆಗೆ ಚಿತ್ರ ಬಿಡುಗಡೆಗೆ ಅವಕಾಶ ನೀಡೋದಿಲ್ಲ ಎಂದಿವೆ.

ಈಗಾಗಲೇ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದು ಚಿತ್ರ ಬಿಡುಗಡೆಗೆ ಅವಕಾಶ ನೋಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದರಿಂದ ‘ಬಾಹುಬಲಿ-2’ ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗುತ್ತೋ ಇಲ್ವೋ ಎಂಬ ಅನುಮಾನ ಕಾಡಿದೆ.

ಕಾವೇರಿ ವಿಚಾರವಾಗಿ ಕರ್ನಾಟಕದಲ್ಲಿ ಜನರ ಭಾವನೆಗೆ ಧಕ್ಕೆ ಆಗುವ ರೀತಿಯಲ್ಲಿ ಮಾತನಾಡಿದ ಸತ್ಯರಾಜ್ ವಿರುದ್ದ ನಮ್ಮ ಆಕ್ರೋಶವಿದೆ. ಬಾಹುಬಲಿ ಚಿತ್ರವದ ವಿರುದ್ಧವಲ್ಲ ಎಂದು ಈಗಾಗಲೇ ಕನ್ನಡಪರ ಸಂಘಟನೆಗಳು ಸ್ಪಷ್ಟಪಡಿಸಿದೆ. ಒಂದು ವೇಳೆ ಕಟ್ಟಪ್ಪ ಕ್ಷಮೆಯಾಚಿಸಿದರೆ ಚಿತ್ರಬಿಡುಗಡೆಗೆ ಅವಕಾಶ ನಿಡೋದಾಗಿ ಅವರು ಹೇಳಿದ್ದಾರೆ.

ಏಪ್ರಿಲ್ 28 ರಂದು ಪ್ರತಿಭಟನೆ ನಡೆಸಲು ಕನ್ನಡಪರ ಸಂಘಟನೆಗಳು ನಿರ್ಧರಿಸಿದ್ದು, ಈ ಕುರಿತಂತೆ ಈಗಾಗಲೇ ವಾಟಾಳ್ ನಾಗರಾಜ್ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ. ಹೀಗಾಗಿ ‘ಬಾಹುಬಲಿ-2’ ಚಿತ್ರ ಕರ್ನಾಟಕದಲ್ಲಿ ರಿಲೀಸ್ ಆಗುತ್ತೋ ಇಲ್ಲವೋ ಎಂಬ ಕುರಿತಂತೆ ಅನುಮಾನ ಶುರುವಾಗಿದೆ..

Courtesy: Balkani News

Facebook Auto Publish Powered By : XYZScripts.com