ಕರ್ನಾಟಕದಲ್ಲಿ ತಮಿಳು ಚಿತ್ರಗಳ ಪ್ರದರ್ಶನಕ್ಕೆ ವಿರೋಧ!

ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ರದ್ದು ಮಾಡಿರುವ ಹಿನ್ನಲೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಹೀಗಾಗಿ, ನಮ್ಮ ರಾಜ್ಯದಲ್ಲೂ ತಮಿಳು ಚಿತ್ರಗಳ ಪ್ರದರ್ಶನವನ್ನ ರದ್ದುಗೊಳಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಆಹಗ್ರಹಿಸುತ್ತಿದೆ.

ರಾಜ್ಯದ ಎಲ್ಲ ಚಿತ್ರಮಂದಿರ ಹಾಗೂ ಮಾಲ್ ಗಳಲ್ಲಿ ಪ್ರದರ್ಶನವಾಗುತ್ತಿರುವ ತಮಿಳು ಚಿತ್ರಗಳನ್ನ ನಿಲ್ಲಿಸಲು ಕನ್ನಡ ಹೋರಾಟಗಾರರು ಮುಂದಾಗಿದ್ದಾರೆ.

ಕನ್ನಡಿಗರಿಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ತಮಿಳು ನಟ ಸತ್ಯರಾಜ್ ನಿನ್ನೆ (ಏಪ್ರಿಲ್ 21) ಮಧ್ಯಾಹ್ನ ವಿಷಾದ ವ್ಯಕ್ತಪಡಿಸಿದ್ದರು. ಸತ್ಯರಾಜ್ ವಿಷಾದ ವ್ಯಕ್ತಪಡಿಸುತ್ತಿದ್ದಂತೆ ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳ ಪ್ರದರ್ಶನವನ್ನ ರದ್ದುಗೊಳಿಸಲಾಗಿದೆ. ಇದೀಗ, ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳನ್ನ ಬ್ಯಾನ್ ಮಾಡಿರುವುದರಿಂದ ಕರ್ನಾಟಕದಲ್ಲೂ ತಮಿಳು ಚಿತ್ರಗಳ ಪ್ರದರ್ಶನವನ್ನ ರದ್ದು ಮಾಡಲು ನಿರ್ಧರಿಸಲಾಗಿದೆ.

Courtesy: Filmibeat

Facebook Auto Publish Powered By : XYZScripts.com