ಕರುನಾಡ ಚಿತ್ರರಂಗದ ಸಂಗೀತ ಮಾಂತ್ರಿಕನಿಗೆ ಕಂಬನಿಯ ಮಹಾಪೂರ

ಕರ್ನಾಟಕ ಶಾಸ್ತ್ರಿಯ ಸಂಗೀತದ ಮಹಾಮಾಂತ್ರಿಕ ಬಾಲಮುರಳಿ ಕೃಷ್ಣ ನಿಧನ ಕರುನಾಡ ಸಂಗೀತಾಭಿಮಾನಿಗಳು ಹಾಗೂ ಕನ್ನಡ ಚಿತ್ರ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.
ಡಾ. ಮಂಗಳಂಪಲ್ಲಿ ಬಾಲಮುರಳಿಕೃಷ್ಣ  ಆಂಧ್ರ ಪ್ರದೇಶ ಮೂಲದವರಾದರೂ, ಕನ್ನಡಕ್ಕೆ ಅವರು ಸಂಪತ್ತೆನಿಸಿದ್ದರು.
 1930 ಜುಲೈ 6ರಂದು ಶಂಕರಾಗುಪ್ತಂ ಎಂಬ ಗ್ರಾಮದಲ್ಲಿ ಜನಿಸಿದ ಮುರಳಿಗೆ,  ಹರಿಕಥಾ ವಿದ್ವಾನ್  ಸತ್ಯ ನಾರಾಯಣ ಅವರು, ಹೆಸರಿನ ಮೊದಲಿಗೆ ಬಾಲ ಎಂದು ಸೇರಿಸಿದರು. ಹೀಗಾಗಿ ಸಂಗೀತ ಲೋಕದಲ್ಲಿ ಬಾಲ ಮುರುಳಿಕೃಷ್ಣ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಮರುಳಿ ಕೃಷ್ಣ ಅವರ ತಂದೆ  ಪಟ್ಟರಾಭಿರಾಮಯ್ಯ, ಕೊಳಲು ಮತ್ತು ಪಿಟೀಲು ವಾದಕ. ತಾಯಿ ಸೂರ್ಯಕಾಂತಮ್ಮ ಅವರು ಸುಪ್ರಸಿದ್ಧ ವೀಣಾವಾದಕಿ. ಹೀಗಾಗಿ, ಮನೆಯಲ್ಲಿ ಸಂಗೀತದ ವಾತಾವರಣವಿದ್ದರಿಂದ ಸಹಜವಾಗಿಯೇ ಮುರಳಿ ಕೃಷ್ಣ ಅವರನ್ನು ಆಕರ್ಷಿಸಿತು.
ಸಂಗೀತ ಲೋಕದಲ್ಲಿ ಹೊಸ ರಾಗಗಳನ್ನು ಸಂಯೋಜನೆ ಮಾಡುವುದರಲ್ಲಿ ಬಾಲಮುರಳಿಕೃಷ್ಣ ಹೆಸರುವಾಸಿ. ಐದು ಸ್ವರಗಳಿಲ್ಲದೆ, ರಾಗಗಳು ರಂಜಿಸುವುದಿಲ್ಲ ಎಂಬ ಸಂಪ್ರದಾಯವಿತ್ತು. ಆದರೆ, ಇದನ್ನು ಮೀರಿ 4 ಹಾಗೂ 3 ಸ್ವರಗಳ ರಾಗವನ್ನು ಬಾಲಮುರುಳಿಕೃಷ್ಣ ನುಡಿಸಿ ಜನಮನ್ನಣೆ ಗಳಿಸಿದರು.
ಸಂಗೀತದ ಜತೆಗೆ ಪುಸ್ತಕಗಳ ಓದುವುದರಲ್ಲೂ ಅಪಾರ ಆಸಕ್ತಿ ಹೊಂದಿದ್ದ ಬಾಲಮುರಳಿಕೃಷ್ಣ ವರ್ಣಂ ತಿಲ್ಲಾನ ಕುರಿತ ಸೂರ್ಯಕಾಂತಿ ಎಂಬ ಸಂಶೋಧನಾ ಕೃತಿಯನ್ನು ರಚಿಸಿದ್ದಾರೆ.
ಮಲೇಷಿಯಾ, ಸಿಂಗಾಪುರ, ಅಮೆರಿಕ,  ಸೇರಿದಂತೆ ಏಷ್ಯಾ ಮಾತ್ರವಲ್ಲ ಪಾಶ್ಚಿಮಾತ್ಯ ದೇಶಗಳಲ್ಲೂ  ಸಂಗೀತ ಕಚೇರಿ ನಡೆಸಿ, ಜಾಗತಿಕ ಸ್ವರಸಾಮ್ರಾಟರೆನಿಸಿದ್ದಾರೆ.
 ಅವರ ಕಂಠಸಿರಿಯ ನೂರಾರು ಕ್ಯಾಸೆಟ್ ಆಲ್ಬಂಗಳು ಮನೆಮಾತಾಗಿದೆ. ಹಾಡುಗಾರಿಕೆಯಲ್ಲದೆ, ಪಿಟೀಲು ನುಡಿಸುವ ಕಯಾಲಿ ಹೊಂದಿದ್ದ ಡಾ. ಮುರಳಿಕೃಷ್ಣ, ಮೃದಂಗ, ಕೊಳಲು ಬಾರಿಸುವುದರಲ್ಲಿ ಮೊದಲಿಗರು.

ಮುರಳಿಕೃಷ್ಣರ  ಗಾಯನ ಬದುಕಿನ ವೈಶಿಷ್ಯಗಳು

 ಸಂಧ್ಯಾರಾಗ, ಹಂಸಗೀತೆ ಇಡೀ ಚಿತ್ರಕ್ಕೆ ಹಾಡೇ ಜೀವಾಳ.
 ಸುಬ್ಬಾಶಾಸ್ತ್ರಿ,  ಗಾನಯೋಗಿ ರಾಮಣ್ಣ, ಶ್ರೀ ಪುರಂದರ ದಾಸರು, ಚಿತ್ರಗಳಲ್ಲೂ ಇವರ ಸಿರಿಕಂಠ.
ಮುತ್ತಿನ ಹಾರ, ಅಮ್ಮ  ಚಿತ್ರದಲ್ಲೂ ಸಂಗೀತ ಸುಶ್ರಾವ್ಯ.
ಕೀರ್ತನೆ , ದೇವರ ನಾಮಗಳ ಕಂಠಸಿರಿಯ ಇಂಪು.
ಅವರ ಸಂಗೀತ ಲೋಕದ ಸಾಧನೆಗೆ ಸಿಕ್ಕಿದ್ದ ಪ್ರಶಸ್ತಿಗಳು ಹಲವಾರು.
ಆಂಧ್ರ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪುರಸ್ಕಾರ.
ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಯ ಗರಿ.


Courtesy: Balkani News

Facebook Auto Publish Powered By : XYZScripts.com