ಕರೀನಾ-ಸೈಫ್ ಆಲಿ ಕೈಯಲ್ಲಿ ಗಂಡು ಮಗು..!!

ಬಾಲಿವುಡ್ ಮಂದಿ ಕೂತ್ರು ಸುದ್ದಿ ನಿಂತ್ರು ಸುದ್ದಿ. ಅದರಲ್ಲೂ ಗರ್ಭಿಣಿಯಾಗಿದ್ದೆ ತಡ ಬಾಲಿವುಡ್ ಬೇಬೋ ಕರೀನಾ ಕಾಪೂರು ಪ್ರತಿದಿನ ಸುದ್ದಿಗೆ ಗ್ರಾಸವಾಗುತ್ತಲೇ ಇದ್ದಾರೆ. ಅದರಲ್ಲೂ ಇದೀಗ ಕರೀನಾ ಹಾಗೂ ಸೈಫ್ ದಂಪತಿಗಳು ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದು ಇನ್ನೆನೂ ಕೆಲವೇ ದಿನಗಳಲ್ಲಿ ಮುದ್ದಾದ ಮಗುವಿಗೆ ಕರೀನಾ ಜನ್ಮ ನೀಡಲಿದ್ದಾರೆ. ಡಿಸೆಂಬರ್ 20ಕ್ಕೆ ಕರೀನಾ ಅವರಿಗೆ ವೈದ್ಯರು ಡೇಟ್ ಕೊಟ್ಟಿರುವುದರಿಂದ ಸಹಜವಾಗಿಯೇ ದಂಪತಿಗಳು ಭಾರಿ ನಿರೀಕ್ಷೆಯಲ್ಲಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಟೋವೊಂದು ಹರಿದಾಡುತ್ತಿದ್ದು, ಕರೀನಾ-ಸೈಫ್ ದಂಪತಿಗಳು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಭಾರಿ ಕುತೂಹಲವನ್ನು ಉಂಟು ಮಾಡಿದೆ. ಮಗುವಿನೊಂದಿಗೆ ಇರುವ ಈ ಫೋಟೋ ನಕಲಿಯಾಗಿದೆ ಎನ್ನಲಾಗಿದ್ದು, ಮಗು ಹುಟ್ಟುವ ಮೊದಲೇ ಅಭಿಮಾನಿಗಳು ಏನೇನೊ ಸುದ್ದಿ ಹರಿಬಿಟ್ಟು, ಇನ್ನಷ್ಟು ಗಲಿಬಿಲಿ ಉಂಟು ಮಾಡುತ್ತಿದ್ದಾರೆ. ಇಷ್ಟೆಲ್ಲಾ ಸುದ್ದಿ ಹರಿದಾಡಿದರೂ ಕಾಪೂರ್ ಕುಟುಂಬ ಮಾತ್ರ ಮೌನವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ
Courtesy: Balkani News

Facebook Auto Publish Powered By : XYZScripts.com