ಕನ್ನಡ ಚಿತ್ರ ರಂಗದಲ್ಲಿ 15 ವರ್ಷ ಪೂರೈಸಿದ ಉಗ್ರಂ ಶ್ರೀ ಮುರುಳಿ

ಸಾಮಾನ್ಯವಾಗಿ ಎಲ್ಲರೂ ನಟ ಶ್ರೀಮುರುಳಿ ಅವರ ಮೊದಲ ಚಿತ್ರ ‘ಉಗ್ರಂ’ ಎಂದೇ ಬಹುತೇಕರು ಭಾವಿಸಿದ್ದಾರೆ. ಆದರೆ ಅದಕ್ಕಿಂತ ಮೊದಲು ಅಂದರೆ 2003 ರಲ್ಲಿ ಎಸ್ ನಾರಾಯಣ್ ನಿರ್ದೇಶನದ ‘ಚಂದ್ರ ಚಕೋರಿ’ ಚಿತ್ರದ ಮೂಲಕ ಮುರುಳಿ ನಾಯಕನ ಪಟ್ಟಕ್ಕೇರಿ ಚಲನಚಿತ್ರರಂಗ ಪ್ರವೇಶಿಸಿದರು. ಈ ಚಲನಚಿತ್ರವು ಉತ್ತಮ ಪ್ರದರ್ಶನ ನೀಡಿತು ಮತ್ತು ಅವರ ಅಭಿನಯವು ಪ್ರಶಂಸೆ ಗಳಿಸಿತು ಹಾಗೂ ಬೆಳಗಾವಿ “ಪ್ರಕಾಶ್’ ಚಿತ್ರಮಂದಿರದಲ್ಲಿ 500 ದಿನಗಳನ್ನು ಪೂರೈಸುವುದರ ಮೂಲಕ ದಾಖಲೆ ನಿರ್ಮಿಸಿತ್ತು.

ಶ್ರೀನಗರ ಕಿಟ್ಟಿ ಮತ್ತು ದೊಡ್ಡಣ್ಣನಂತವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು ಈ ಮೂಲಕ ಶ್ರೀನಗರ ಕಿಟ್ಟಿ ಅಭಿನಯಿಸಿದ ಮೊದಲ ಚಿತ್ರವೂ ಇದಾಗಿತ್ತು. ಈ ಚಿತ್ರವು 2013 ರಲ್ಲಿ ಒಡಿಯಾದಲ್ಲಿ ಮು ಇಕಾ ತುಮರಾ ಎಂಬ ಹೆಸರಿನಲ್ಲಿ ರೀಮೇಕ್ ಆಗಿದ್ದು, ಓಡಿಯಾದಲ್ಲಿ ರೀಮೇಕ್ ಆದ ಮೊದಲ ಕನ್ನಡ ಚಲನಚಿತ್ರವೂ ಆಗಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವೆ ಭಾಷಾಶಾಸ್ತ್ರದ ಆಧಾರದ ಮೇಲೆ ವಿವಾದವನ್ನು ಕೇಂದ್ರೀಕರಿಸಿದ ದ್ವಿತಿಯ ಚಿತ್ರ ‘ಕಂಠಿ’ಯಲ್ಲಿ, ಕಾಲೇಜು ವಿದ್ಯಾರ್ಥಿಯ ನಾಮಸೂಚಕ ನಾಯಕತ್ವವನ್ನು ವಹಿಸಿದ ಅವರು, ಮರಾಠಿ ಹುಡುಗಿಯನ್ನು ಪ್ರೀತಿಸುತ್ತಾ ರಾಜಕೀಯವಾಗಿ ಸಿಲುಕಿಕೊಳ್ಳುತ್ತಾರೆ. ಇವರ ಅಭಿನಯವು ಇವರನ್ನು ಅತ್ಯುತ್ತಮ ನಟನಿಗಾಗಿರುವ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಗೆಲುವು ಸೋಲುಗಳ ಹಾದಿಯಲ್ಲಿ ಸಾಗುತ್ತಿದ್ದ ಮುರುಳಿಯವರಿಗೆ ಬಹು ದೊಡ್ಡ ಬ್ರೇಕ್ ನೀಡಿದ್ದು ‘ಉಗ್ರಂ’ ಇದು ಪ್ರಶಾಂತ್ ನೀಲ್ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿತ್ತು. 2014 ರಲ್ಲಿ ತೆರೆಗೆ ಬಂದು ಆ ವರ್ಷದ ಬ್ಲಾಕ್ ಬ್ಲಸ್ಟರ್ ಎನಿಸಿಕೊಂಡಿತ್ತು. ಕಳೆದ ವರ್ಷ ತೆರೆ ಕಂಡು ಜನ ಮನ ಸೂರೆಗೊಂಡ ‘ಮಪ್ತಿ’ ಚಿತ್ರ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದು, ಶಿವರಾಜ್ ಕುಮಾರ ಅವರೊಟ್ಟಿಗಿನ ಅಭಿನಯ ಮನ ಸೆಳೆದಿತ್ತು. ಹೀಗಾಗಿ ಈ ವರ್ಷ ಶ್ರೀ ಮುರುಳಿ ಸ್ಪೇಷಲ್. ಅವರ ಸಿನಿ ಜರ್ನಿ ಹೀಗೆಯೇ ಮುಂದುವರೆಯುತ್ತಿರಲಿ ಎಂಬುದು ಸಹ ನಮ್ಮ ಆಶಯ.

Facebook Auto Publish Powered By : XYZScripts.com